ಬ್ರೆಜಿಲ್ನಲ್ಲಿ ನಡೆದ ಚುನಾವಣೋತ್ತರ ಗಲಭೆಯ ಆರೋಪಿಗಳ ಪಟ್ಟಿಗೆ ಮಾಜಿ ಅಧ್ಯಕ್ಷ ಬಲಪಂಥೀಯ ನಾಯಕ ಜೈರ್ ಬೋಲ್ಸನಾರೊ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಸೇರಿಸಿದೆ.

ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ನ್ಯಾಯಸಮ್ಮತತೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅವರು ವಿಡಿಯೊ ಹಾಕಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ನಿಂದ ಈ ನಡೆ ವ್ಯಕ್ತವಾಗಿದೆ.

ಜನವರಿ 8 ರಂದು ನಡೆದ ಗಲಭೆಗೆ ಬೋಲ್ಸನಾರೊ ಅವರ ಕೂಡ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಆರೋಪಿಗಳ ಪಟ್ಟಿಯಲ್ಲಿ ಬೋಲ್ಸನಾರೊ ಅವರನ್ನೂ ಸೇರಿಸಿದೆ.

ಚುನಾವಣೆ ಫಲಿತಾಂಶ ಬರುವುದಕ್ಕೂ ಮುನ್ನ ಅವರು ಅಮೆರಿಕಕ್ಕೆ ಪಲಾಯನ ಮಾಡಿದ್ದಾರೆ.

ಬೋಲ್ಸನಾರೊ ಅವರ ಬೆಂಬಲಿಗರು ಜನವರಿ 8 ರಾಷ್ಟ್ರಪತಿ ಭವನ, ಸುಪ್ರೀಂ ಕೋರ್ಟ್ ಮತ್ತು ಸಂಸತ್ ಮೇಲೆ ದಾಳಿ ನಡೆಸಿದ್ದರು. ಬ್ರೆಜಿಲ್ನ ಧ್ವಜದ ಬಣ್ಣವುಳ್ಳ (ಹಳದಿ, ಹಸಿರು) ಅಂಗಿ ತೊಟ್ಟಿದ್ದ ಪ್ರತಿಭಟನಾಕಾರರು ಭಾನುವಾರ ರಾಜಧಾನಿ ಬ್ರೆಸಿಲಿಯಾದಲ್ಲಿ ದಾಂಧಲೆ ನಡೆಸಿದ್ದರು.

ಬೋಲ್ಸನಾರೊ ಅವರ ಇತ್ತೀಚಿನ ಚುನಾವಣಾ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಪ್ರತಿಭಟನಾಕಾರರು, ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸುವ ಮೂಲಕ ಪ್ರತಿಕಾರದ ಕ್ರಮಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

2022ರ ಅಕ್ಟೋಬರ್ 31 ರಂದು ನಡೆದ ಚುನಾವಣೆಯಲ್ಲಿ ಬೋಲ್ಸನಾರೊ ಅವರನ್ನು ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಕಡಿಮೆ ಅಂತರದಿಂದ ಸೋಲಿಸಿ ಅಧಿಕಾರಕ್ಕೆರಿದ್ದರು. ಅದಾದ ಒಂದು ವಾರದಲ್ಲಿ ಗಲಭೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.