ಬೀಜಿಂಗ್: ಚೀನಾದ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಳೆದಿದ್ದ ಚೀನಾದ ಮೂವರು ಗಗನಯಾತ್ರಿಗಳು ಶೆಂಜೌ-18ರ ಗಗನ ನೌಕೆಯಲ್ಲಿ ಸೋಮವಾರ ನಸುಕಿನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್ಎ) ತಿಳಿಸಿದೆ.

ಗಗನಯಾತ್ರಿಗಳಾದ ಯೆ ಗುವಾಂಗ್ಫು, ಲೀ ಕಾಂಗ್ ಮತ್ತು ಲಿ ಗುವಾಂಗ್ಸು ಅವರಿದ್ದ ಶೆಂಝೌ-18 ಬಾಹ್ಯಾಕಾಶ ನೌಕೆಯು ಉತ್ತರ ಚೀನಾದೊಳಗಿನ ಮಂಗೋಲಿಯಾ ಸ್ವಾಯತ್ತ ಪ್ರದೇಶ ಡಾಂಗ್ಫೆಂಗ್ ಇಳಿದಾಣದಲ್ಲಿ ನಸುಕಿನ 1.24ಕ್ಕೆ (ಬೀಜಿಂಗ್ ಸಮಯ) ಯಶಸ್ವಿಯಾಗಿ ಭೂಮಿಯನ್ನು ಸ್ಪರ್ಶಿಸಿದೆ.

ಚೀನಾ ಕೆಳ ಕಕ್ಷೆಯಲ್ಲಿ ನಿರ್ಮಿಸುತ್ತಿರುವ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಅಭಿವೃದ್ಧಿ ಕಾರ್ಯದಲ್ಲಿ ಈ ಮೂವರು ಗಗನಯಾತ್ರಿಗಳು ನಿರತರಾಗಿದ್ದರು. ಬಾಹ್ಯಾಕಾಶದಲ್ಲಿ 192 ದಿನಗಳು ಕಳೆದಿರುವ ಈ ಗಗನಯಾತ್ರಿಗಳು ಆರೋಗ್ಯವಾಗಿದ್ದಾರೆ. ಶೆಂಜೌ-18 ಮಾನವಸಹಿತ ಗಗನಯಾನ ಯೋಜನೆ ಯಶಸ್ವಿಯಾಗಿದೆ ಎಂದು ಸಿಎಂಎಸ್ಎ ತಿಳಿಸಿದೆ.

ಈ ವರ್ಷದ ಏಪ್ರಿಲ್ನಲ್ಲಿ ಶೆಂಜೌ-18 ಮಾನವಸಹಿತ ಅಂತರಿಕ್ಷ ನೌಕೆಯನ್ನು ಚೀನಾ ಉಡಾವಣೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.