ಚೀನಾ: ಕೊರೊನಾ ವೈರಸ್‌ನಿಂದಾಗಿ ಚೀನಾದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲಿದ್ದು, ಸುಮಾರು 170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 1700 ಮಂದಿ ಈ ರೋಗದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೀನಾದಲ್ಲಿ ಇದುವರೆಗೆ ಒಂದು ಕೋಟಿಗಿಂತಲೂ ಅಧಿಕ ಜನರಿಗೆ ಈ ಸೋಂಕುತಗುಲಿದ್ದು, ತಡೆಗಟ್ಟಲು ಚೀನಾ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ವೈರಸ್ ಮಾತ್ರ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿಶ್ವದ ಎಲ್ಲಾ ದೇಶಗಳಲ್ಲಿರುವ ಆರೋಗ್ಯ ಸಂಸ್ಥೆಗಳು, ಸಚಿವಾಲಯಗಳು ಈ ರೋಗವನ್ನು ತಡೆಗಟ್ಟಲು ಹಲವು ರೀತಿಯಲ್ಲಿ ಪ್ರಯತ್ನಸುತ್ತಿವೆ. ಆಸ್ಟ್ರೇಲಿಯಾ, ಫ್ರಾನ್ಸ್, ಅಮೆರಿಕಾ ಹಾಗೂ ಚೀನಾ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಕೊರೊನಾ ವೈರಸ್ ಹರಡಿರುವುದು ವರದಿಯಾಗಿದೆ.ಚೀನಾದ ವುಹಾನ್ ನಗರದಲ್ಲಿ ಮೊದಲು ಕಂಡು ಬಂದಿದೆ.

ಟಿಬೆಟ್ ವರದಿ: ಕೊರೊನಾ ವೈರಸ್ ವ್ಯಕ್ತಿ ಆಸ್ಪತ್ರೆಗೆ ದಾಖಲು
ಲ್ಹಾಸಾ: ಟಿಬೆಟ್‌ನಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ವೈರಸ್ ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡಿದೆ. ಚೀನಾದಿಂದ ವಾಪಸಾದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. 34 ವರ್ಷ ವಯಸ್ಸಿನ ಜಂಗ್ ಎಂಬಾತ ಚೀನಾದ ಹುಬೇ ನಗರದಲ್ಲಿ ಕೆಲಸ ಮಾಡುತ್ತಿದ್ದ. ಕೂಡಲೆ ಸೋಂಕು ಕಾಣಿಸಿಕೊಂಡಿದ್ದರಿಂದ ಈತ ತನ್ನ ತವರು ಮನೆ ಟಿಬೆಟ್‌ಗೆ ವಾಪಸಾದ. ಈತನನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಕೊರೊನಾ ವೈರಸ್ ಎಫೆಕ್ಟ್: ಮಧುರೈ ಮಾಸ್ಕ್ಗೆ ಚೀನಾದಲ್ಲಿ ಬೇಡಿಕೆ

ಸುಜೋ ನಗರದಿಂದ ಲ್ಹಾಸಾ ನಗರಕ್ಕೆ ಜನವರಿ 24ರಂದು ಬಂದಿಳಿದ. ಅನಾರೋಗ್ಯ ಪೀಡಿತನಾಗಿದ್ದ ಈತನನ್ನು ಮಾರನೆ ದಿನ ಆಸ್ಪತ್ರೆಗೆ ದಾಖಲಿಸಲಾಯಿತು. ಬುಧವಾರ ಕೊರೊನಾ ವೈರಸ್ ಸಂಬಂಧಿಸಿದ ಎಲ್ಲಾ ರೀತಿಯ ತಪಾಸಣೆ ನಡೆಸಲಾಯಿತು. ಆ ಸಮಯದಲ್ಲಿಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.