ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕು ಏರಿಕೆ ಹಿಂದೆಯೇ, ಅದರಿಂದ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸಿವೆ.

ಇಲ್ಲಿನ ಚಿತಾಗಾರದ ಬಳಿ ಅಂತ್ಯಕ್ರಿಯೆಗೆ ಚಳಿಯಲ್ಲೂ ಸಂಬಂಧಿಕರು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಚಿತಾಗಾರದ ಸಿಬ್ಬಂದಿ ಮೃತಪಟ್ಟವರ ಹೆಸರು ಕೂಗಿದ ಹಿಂದೆಯೇ, ಸಂಬಂಧಿಕರು ಅಂತ್ಯಕ್ರಿಯೆ ವಿಧಿವಿಧಾನ ನಡೆಸಲು ಧಾವಿಸಿ ಬರುವ ದೃಶ್ಯಗಳಿವೆ. ಹೀಗೆ, ಕಾಯುತ್ತಿದ್ದ ಸಂಬಂಧಿಯೊಬ್ಬರು ಮೃತಪಟ್ಟಿರುವ ನಮ್ಮ ಸಂಬಂಧಿಕರಿಗೆ ಸೋಂಕು ತಗುಲಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಚಿತಾಗಾರವಿರುವ ಸಂಕೀರ್ಣದಲ್ಲಿಯೇ ಮಳಿಗೆ ಹೊಂದಿರುವವ್ಯಾಪಾರಿಯೊಬ್ಬರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಚಿತಾಗಾರಕ್ಕೆ ಬರುತ್ತಿರುವ ಶವಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಸಾಮಾನ್ಯವಾಗಿ ನಿತ್ಯ ಸರಾಸರಿ 12 ಶವಗಳ ಅಂತ್ಯಕ್ರಿಯೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿತ್ಯ ಅಂತ್ಯಕ್ರಿಯೆಗೆ ತರಲಾಗುತ್ತಿರುವ ಶವಗಳ ಸಂಖ್ಯೆ ಸರಾಸರಿ 150 ಆಗಿದೆ ಎಂದು ತಿಳಿಸಿದರು.

ಡೊಂಗಜಿಯಾವೊ ಚಿತಾಗಾರದ ಬಳಿ ಸುಮಾರು 12 ಶವಗಳು, ಅಂತ್ಯ ಕ್ರಿಯೆಯ ಸರದಿಯಲ್ಲಿ ಇದ್ದುದನ್ನು ಎ.ಪಿ ಸುದ್ದಿ ಸಂಸ್ಥೆಯ ವರದಿಗಾರರು ಸ್ವತಃ ಗಮನಿಸಿದ್ದಾರೆ.

ಚೀನಾ ಸರ್ಕಾರ ಡಿ.4ರಂದು ಕೋವಿಡ್ ಸಾವಿನ ಒಂದು ಪ್ರಕರಣ ವನ್ನು ಅಧಿಕೃತವಾಗಿ ವರದಿ ಮಾಡಿಲ್ಲ. ಚೀನಾ ಸದ್ಯ ಅಧಿಕೃತವಾಗಿ ಪ್ರಕಟಿಸಿರು ವಂತೆ ಕೋವಿಡ್ನಿಂದಾಗಿ 5,235 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.