ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ಪ್ರಯಾಣದ ಬಗ್ಗೆ ಅಮೆರಿಕ ಎರಡು ಮತ್ತು ಮೂರನೇ ಹಂತದ ಸಲಹೆಗಳನ್ನು ನೀಡಿದ್ದು, ಭಾರತ–ಪಾಕ್ ಗಡಿ ಸಮೀಪಕ್ಕೆ ತೆರಳದಂತೆ ಸೂಚಿಸಿದೆ.

ಭಯೋತ್ಪಾದನೆ ಮತ್ತು ನಾಗರಿಕ ಅಶಾಂತಿ ಹಿನ್ನೆಲೆ ಯಾರೂ ಜಮ್ಮು–ಕಾಶ್ಮೀರಕ್ಕೆ ಪ್ರಯಾಣಿಸಬಾರದು. ಸಂಭಾವ್ಯ ಸಶಸ್ತ್ರ ಸಂಘರ್ಷ ಇರುವುದರಿಂದ ಭಾರತ–ಪಾಕಿಸ್ತಾನ ಗಡಿಯ 10 ಕಿ.ಮೀ. ಒಳಗೆ ಯಾರೂ ಹೋಗಬಾರದು ಎಂದು ಅಮೆರಿಕ ಸರ್ಕಾರಿ ಇಲಾಖೆಯು ತನ್ನ ನಾಗರಿಕರಿಗೆ ಸೂಚಿಸಿದೆ ಎಂದು ಅಮೆರಿಕ ಸೋಮವಾರ ಭಾರತಕ್ಕೆ ನೀಡಿರುವ ತನ್ನ ಸಲಹಾ ಪತ್ರದಲ್ಲಿ ತಿಳಿಸಿದೆ.

‘ಅತ್ಯಾಚಾರವು ಭಾರತದಲ್ಲಿ ಬಹುಬೇಗ ಬೆಳೆಯುತ್ತಿರುವ ಅಪರಾಧ ಕೃತ್ಯವಾಗಿದೆ ಎಂದು ಭಾರತೀಯ ಅಧಿಕಾರಿಗಳು ವರದಿ ನೀಡಿದ್ದಾರೆ. ಲೈಂಗಿಕ ಅಪರಾಧದಂತಹ ಹಿಂಸಾತ್ಮಕ ಕೃತ್ಯಗಳು ಪ್ರವಾಸಿ ತಾಣಗಳು ಮತ್ತು ಇತರ ಸ್ಥಳಗಳಲ್ಲಿ ಸಂಭವಿಸುತ್ತಿವೆ’ ಎಂದು ಪತ್ರವು ಹೇಳಿದೆ.

‘ಇಂತಹ ಪ್ರವಾಸಿ ತಾಣಗಳು, ಸಾರಿಗೆ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಸರ್ಕಾರಿ ಕೇಂದ್ರಗಳಲ್ಲಿ ಉಗ್ರರು ಯಾವುದೇ ಸೂಚನೆಯಿಲ್ಲದೆ ದಾಳಿ ನಡೆಸುತ್ತಾರೆ’ ಎಂದೂ ಸಲಹಾ ಪತ್ರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.