ವಿಶ್ವಸಂಸ್ಥೆ: ಕೋವಿಡ್–19 ನಿರ್ಬಂಧಗಳಿಂದಾಗಿ ಹೊಸ ಮತದಾನ ವ್ಯವಸ್ಥೆಯಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಐದು ಸ್ಥಾನಗಳಿಗೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಭಾರತಕ್ಕೆ ಗೆಲುವು ನಿಚ್ಚಳವಾಗಿದೆ.

193 ಸದಸ್ಯರ ಸಾಮಾನ್ಯ ಸಭೆಯು ಶುಕ್ರವಾರ ‘ಕೋವಿಡ್–19 ಸಮಯದಲ್ಲಿ ಸಮಗ್ರ ಸಭೆಯಿಲ್ಲದೇ ರಹಸ್ಯ ಮತದಾನದ ಮೂಲಕ ಚುನವಣೆ ನಡೆಸುವ ವಿಧಾನ’ ಎನ್ನುವ ಶೀರ್ಷಿಕೆಯನ್ನು ಅಂಗೀಕರಿಸಿತು.2021–22ರ ಅವಧಿಗೆ 15 ರಾಷ್ಟ್ರಗಳ ಮಂಡಳಿಗೆ 5 ಕಾಯಂ ಸದಸ್ಯರ ಚುನಾವಣೆಯು ಜೂನ್ 17ಕ್ಕೆ ನಿಗದಿಪಡಿಸಲಾಗಿದೆ.

ಏಷ್ಯಾ ಫೆಸಿಫಿಕ್ನಿಂದ ಸ್ಪರ್ಧಿಸುತ್ತಿರುವ ಏಕೈಕ ರಾಷ್ಟ್ರ ಭಾರತವಾಗಿದ್ದು, ಗೆಲುವು ಖಚಿತವಾಗಿದೆ.

ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಏಷ್ಯಾ ಫೆಸಿಫಿಕ್ ಗುಂಪಿನ 55 ಸದಸ್ಯ ರಾಷ್ಟ್ರಗಳು ಕಳೆದ ಜೂನ್ನಲ್ಲಿ ಭಾರತದ ಉಮೇದುವಾರಿಕೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದವು. ಭಾರತದ ಅವಧಿ 2021ರ ಜನವರಿಯಿಂದ ಅರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.