ವಾಷಿಂಗ್ಟನ್: ಪಾಕಿಸ್ತಾನದ ಮೇಲೆ ಭಾರತ ಕ್ಷಿಪಣಿ ಉಡಾಯಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಮೆರಿಕ, ಘಟನೆಯು ಆಕಸ್ಮಿಕವಾಗಿ ಆದದ್ದಾಗಿದೆ ಎಂದಿದೆ.

'ಆಕಸ್ಮಿಕವಾಗಿ ನಡೆದ ಘಟನೆಯನ್ನು ಹೊರತು ಪಡಿಸಿ ಪಾಕ್ ಮೇಲೆ ಭಾರತ ಕ್ಷಿಪಣಿ ಉಡಾಯಿಸಿರುವ ಸೂಚನೆಗಳಿಲ್ಲ' ಎಂದು ಅಮೆರಿಕದ ವಕ್ತಾರ ನೆಡ್ ಪ್ರೈಸ್ ಸೋಮವಾರ ತಿಳಿಸಿದ್ದಾರೆ.

'ಈ ವಿಚಾರವಾಗಿ ಪಾಕಿಸ್ತಾನದ ಆತಂಕವನ್ನು ಭಾರತದ ರಕ್ಷಣಾ ಸಚಿವಾಲಯದ ಗಮನಕ್ಕೆ ತರುತ್ತೇವೆ. ಘಟನೆಯ ಕುರಿತಾಗಿ ನಿಖರವಾಗಿ ಏನು ನಡೆಯಿತು ಎಂಬುದನ್ನು ಭಾರತ ಮಾರ್ಚ್ 9ರಂದು ಸ್ಪಷ್ಟನೆ ನೀಡಿದೆ. ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಯನ್ನು ನಾವು ನೀಡುವುದಿಲ್ಲ' ಎಂದು ಪ್ರೈಸ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನ ಶೀಘ್ರವೇ ಮಾತುಕತೆ ನಡೆಸಬೇಕು, ಘಟನೆಗೆ ಸಂಬಂಧಿಸಿ ವಸ್ತುನಿಷ್ಠ ತನಿಖೆ ನಡೆಯಬೇಕು ಎಂದು ಚೀನಾ ಒತ್ತಾಯಿಸಿದ ಬೆನ್ನಲ್ಲೇ ಅಮೆರಿಕದಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾರ್ಚ್ 9ರಂದು ಸಂಜೆ 6.43ಕ್ಕೆ (ಸ್ಥಳೀಯ ಕಾಲಮಾನ) ಭಾರತದ ಸೂರತ್ಗಡದಿಂದ ಹಾರಿದ ‘ಸೂಪರ್ ಸಾನಿಕ್ ಫ್ಲೈಯಿಂಗ್ ಆಬ್ಜೆಕ್ಟ್’ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚುನ್ನು ನಗರದ ಸಮೀಪ ನೆಲಕ್ಕೆ ಅಪ್ಪಳಿಸಿತ್ತು. ದಿನನಿತ್ಯದ ನಿರ್ವಹಣೆಯ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಕ್ಷಿಪಣಿ ಹಾರಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ಶುಕ್ರವಾರ ಸ್ಪಷ್ಟನೆ ನೀಡಿದೆ.

ಆಕಸ್ಮಿಕ ದಾಳಿ ಬಗ್ಗೆ ಪಾಕ್-ಭಾರತ ಮಾತುಕತೆ ನಡೆಸಲಿ: ಚೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.