ವಾಷಿಂಗ್ಟನ್: ಎಚ್–1ಬಿ ವೀಸಾ ಕೋರಿ 65 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. 2023ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿ ಸಂಸತ್ ನಿಗದಿಪಡಿಸಿರುವ ಮಿತಿಯಷ್ಟು ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸಿದಂತಾಗಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆಯು (ಯುಎಸ್ಸಿಐಎಸ್) ಮಂಗಳವಾರ ಹೇಳಿದೆ.

ಅಮೆರಿಕದ ಕಂಪನಿಗಳು, ವಿಶೇಷ ಕೌಶಲ ಅಗತ್ಯವಿರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ವಿದೇಶಿಯರಿಗೆ ಈ ಎಚ್–1ಬಿ ವೀಸಾ ನೀಡಲಾಗುತ್ತದೆ. ಅದರಲ್ಲೂ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಪ್ರತಿವರ್ಷ ಚೀನಾ ಮತ್ತು ಭಾರತದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತವೆ.

‘ಈ ಮಿತಿಯಿಂದ ವಿನಾಯಿತಿ ನೀಡಲಾದ ವರ್ಗಗಳಿಗೆ ಸೇರಿದ ವೀಸಾ ಅರ್ಜಿಗಳ ಸ್ವೀಕಾರ ಹಾಗೂ ವಿಲೇವಾರಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು’ ಎಂದು ಯುಎಸ್ಸಿಐಎಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.