ಸ್ಯಾನ್ ಫ್ರ್ಯಾನ್ಸಿಸ್ಕೊ: ಕೋವಿಡ್–19 ನಿಯಂತ್ರಣದ ಸಲುವಾಗಿ ನೀಡಲಾಗುವ ಬೂಸ್ಟರ್ ಡೋಸ್ ಲಸಿಕೆಯ ಅರ್ಧ ಡೋಸ್ ಕೂಡ, ಪೂರ್ತಿ ಡೋಸ್ನಷ್ಟೇ ಪರಿಣಾಮಕಾರಿ ಎಂದು ಅಧ್ಯಯನ ವರದಿ ತಿಳಿಸಿದೆ.

ಮರ್ಡೋಚ್ ಮಕ್ಕಳ ಸಂಶೋಧನಾ ಸಂಸ್ಥೆ (ಎಂಸಿಆರ್ಐ) ಹಾಗೂ ಸಾಂಕ್ರಾಮಿಕ ರೋಗಗಳ ಕುರಿತಾದ ಮಂಗೋಲಿಯಾ ರಾಷ್ಟ್ರೀಯ ಸಂಸ್ಥೆ ನಡೆಸಿದ ಸಂಶೋಧನೆಯನ್ನು ಉಲ್ಲೇಖಿಸಿ 'ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ – ವೆಸ್ಟರ್ನ್ ಪೆಸಿಫಿಕ್' ನಿಯಕತಾಲಿಕೆ ವರದಿ ಮಾಡಿದೆ.

ಕೋವಿಡ್ ನಿಯಂತ್ರಣಕ್ಕೆ ನೀಡುವ 'ಫೈಜರ್' ಬೂಸ್ಟರ್ ಲಸಿಕೆಯ ಅರ್ಧ ಡೋಸ್, ಈ ಹಿಂದೆ 'ಆಸ್ಟ್ರಾಜೆನಿಕಾ' ಬೂಸ್ಟರ್ ಲಸಿಕೆಯ ಪೂರ್ತಿ ಡೋಸ್ ಪಡೆದಿದ್ದ ಮಂಗೋಲಿಯಾದ ವಯಸ್ಕರಲ್ಲಿ ಪೂರ್ಣ ಪ್ರಮಾಣದ ಪ್ರತಿಕಾಯ ಸಾಮರ್ಥ್ಯವನ್ನು ಉತ್ಪಾದಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಸ್ಪುಟ್ನಿಕ್ ವಿ ಲಸಿಕೆಯ ಅರ್ಧ ಡೋಸ್ ವಯಸ್ಕರಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಲಾರದು ಎಂಬದೂ ಸಂಶೋಧನೆಯಿಂದ ತಿಳಿದುಬಂದಿದೆ.

18 ವರ್ಷ ಮೇಲ್ಪಟ್ಟ 601 ಮಂದಿ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲ ಲಸಿಕೆ ಪಡೆದ ನಂತರದ 28 ದಿನಗಳವರೆಗಿನ ಪರಿಣಾಮಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.