ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹಾಗೂ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಿಸಾಕಿ ಅವರಿಗೆ ಕೋವಿಡ್ ದೃಢಪಟ್ಟಿದೆ.

ಹಿಲರಿ ಕ್ಲಿಂಟನ್ ಅವರು ತಮಗೆ ಕೋವಿಡ್‌ನ ಸೌಮ್ಯ ಲಕ್ಷಣ ಕಾಣಿಸಿಕೊಂಡಿದೆ. ಸದ್ಯ ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ಕೋವಿಡ್ ನೆಗಟಿವ್ ವರದಿ ಬಂದಿದ್ದು, ತಮ್ಮ ನಿವಾಸದಲ್ಲೇ ಕ್ವಾರಂಟೈನ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಬರಾಕ್ ಒಬಾಮ್ ಅವರಿಗೂ ಕೋವಿಡ್ ತಗುಲಿತ್ತು.

ಕೋವಿಡ್: ಮಾರ್ಚ್ 31ರಿಂದ ನಿರ್ಬಂಧಗಳು ತೆರವು, ಮಾಸ್ಕ್ ಧರಿಸುವಿಕೆ ಮುಂದುವರಿಕೆ

ತಮಗೆ ಮತ್ತೆ ಕೋವಿಡ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಬಗ್ಗೆ ನಡೆಯಲಿರುವ ತುರ್ತು ಸಭೆಗೆ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಯುರೋಪ್‌ಗೆ ತೆರಳುವುದಿಲ್ಲ ಎಂದು ಜೆನ್ ಪಿಸಾಕಿ ಹೇಳಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪತಿ ಹಾಗೂ ಐರ್ಲೇಂಡ್ ಪ್ರಧಾನಿ ಅವರಿಂದ ಪಿಸಾಕಿ ಅವರಿಗೆ ಎರಡನೇ ಬಾರಿಗೆ ಸೋಂಕು ತಗುಲಿದೆ. ಕಳೆದ ವಾರ ಜೋ ಬೈಡನ್ ಅವರಿಗೆ ಕೋವಿಡ್ ದೃಢಪಟ್ಟಿತ್ತು.

ಏ.4ರಿಂದ ನ್ಯೂಜಿಲೆಂಡ್‌ನಲ್ಲಿ ನಿರ್ಬಂಧ ತೆರವು: ನ್ಯೂಜಿಲೆಂಡ್‌ನಲ್ಲಿ ಓಮೈಕ್ರಾನ್ ರೂಪಾಂತರಿ ಸೋಂಕು ಕ್ಷಿಣಿಸುತ್ತಿರುವುದರಿಂದ ಮುಂದಿನ ಎರಡು ವಾರಗಳೊಳಗೆ ಕೋವಿಡ್ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು ಎಂದು ಅಧ್ಯಕ್ಷೆ ಜಸಿಂದಾ ಆರ್ಡೆರ್ನ್ ಬುಧವಾರ ತಿಳಿಸಿದ್ದಾರೆ. ಲಸಿಕೆ ಪಡೆದವರು ಮಾತ್ರ ಮಳಿಗೆಗಳು, ರೆಸ್ಟೋರೆಂಟ್ ಮತ್ತು ಬಾರ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬ ನಿಯಮವನ್ನು ಏ.4ರಿಂದ ಸಡಿಲಗೊಳಿಸಲಾಗುವುದು. ಶಿಕ್ಷಕರು, ಪೊಲೀಸ್ ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರಿಗಿದ್ದ ಲಸಿಕೆ ಕಡ್ಡಾಯ ನಿಯಮವನ್ನುತೆಗೆದು ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.