ಉಪಗ್ರಹ ಚಿತ್ರಗಳು: ಗ್ರೀನ್‌ಲ್ಯಾಂಡ್‌ನಲ್ಲಿ ಕರಗುತ್ತಿರುವ ಹಿಮರಾಶಿ
ಗ್ರೀನ್‌ಲ್ಯಾಂಡ್‌ನ ಅತಿ ದೊಡ್ಡ ಹಿಮರಾಶಿಯು ಕರಗುತ್ತಿದೆ. 'ಫ್ಲೋರಿಡಾವನ್ನು ಎರಡು ಇಂಚುಗಳಷ್ಟು (5 ಸೆಂ.ಮೀ) ನೀರಿನಿಂದ ಆವರಿಸುವಷ್ಟು' ಹಿಮಗಡ್ಡೆ ಕರಗುತ್ತಿರುವುದಾಗಿ ಡೆನ್ಮಾರ್ಕ್ ಸರ್ಕಾರದ ಸಂಶೋಧಕರು ಹೇಳಿದ್ದಾರೆ. ಆರ್ಕ್ಟಿಕ್ ಪ್ರದೇಶದ ವಾತಾವರಣದಲ್ಲಿ ಬಂಧಿಯಾಗಿರುವ ಬಿಸಿ ಗಾಳಿಯಿಂದಾಗಿ ಹಿಮ ಕರಗುವಿಕೆ ಪ್ರಕ್ರಿಯೆ ಹೆಚ್ಚಳವಾಗಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಉತ್ತರ ಗ್ರೀನ್‌ಲ್ಯಾಂಡ್‌ನಲ್ಲಿ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಮೀರಿರುವುದಾಗಿ ಡೆನ್ಮಾರ್ಕ್‌ನ ಹವಾಮಾನ ಸಂಸ್ಥೆಯು ವರದಿ ಮಾಡಿದೆ.ಸುದ್ದಿ ವಿವರ: ಕರಗುತ್ತಿದೆ ಗ್ರೀನ್‌ಲ್ಯಾಂಡ್ ಹಿಮರಾಶಿ: ಏರುತ್ತಿದೆ ಸಾಗರ ಮಟ್ಟ | Prajavani