ಇಸ್ಲಾಮಾಬಾದ್: ‘ನಾವು ಅವರನ್ನು (ತಾಲಿಬಾನಿಗಳನ್ನು) ನಿಯಂತ್ರಿಸಬಹುದು’ ಎಂದು ಯೋಚಿಸುವ ಬದಲು, ಅಫ್ಗಾನಿಸ್ತಾನವನ್ನು ಉತ್ತೇಜಿಸುವುದರ ಜತೆಗೆ ತಾಲಿಬಾನಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡಲು ಜಗತ್ತು ಮುಂದಾಗಬೇಕು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ತಾಲಿಬಾನಿಗಳನ್ನು ನಿಯಂತ್ರಿಸಲು ಅಮೆರಿಕ ಮತ್ತು ಪಾಕಿಸ್ತಾನದಿಂದ ಸಾಧ್ಯವಿಲ್ಲ. ಅಫ್ಗಾನಿಸ್ತಾನದ ಜನರು ಯಾವುದೇ ಕೈಗೊಂಬೆ ಸರ್ಕಾರವನ್ನು ಬೆಂಬಲಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿರುವುದಾಗಿ ‘ಹಿಂದೂಸ್ತಾನ್ ಟೈಮ್’ ವರದಿ ಮಾಡಿದೆ.

‘ತಾಲಿಬಾನಿಗಳಿಗೆ ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲಿಂದ ಯುಎಸ್ ಸೇನಾ ಪಡೆಗಳು ವಾಪಸ್ ಹೋದ ಬಳಿಕ ರಕ್ತಪಾತವಾಗುತ್ತದೆ ಎಂದು ಪಾಕಿಸ್ತಾನವು ಗುಪ್ತಚರ ಮಾಹಿತಿಗಳನ್ನು ಹೊಂದಿತ್ತು’ ಎಂದಿದ್ದಾರೆ.

‘ಸದ್ಯ ಜಗತ್ತು ತಾಲಿಬಾನ್‌ಗೆ ಕಾನೂನುಬದ್ಧ ಸರ್ಕಾರವನ್ನು ರಚಿಸಲು ಮತ್ತು ಅಲ್ಲಿನ ಜನರ ಭರವಸೆಗಳನ್ನು ಈಡೇರಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕು’ ಎಂದು ಖಾನ್ ಹೇಳಿದ್ದಾರೆ.

ತಾಲಿಬಾನ್ ಆಳ್ವಿಕೆಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್ ಖಾನ್, ‘ಹೊರಗಿನವರಿಂದ ಅಫ್ಗನ್ ಮಹಿಳೆಯವರಿಗೆ ಹಕ್ಕುಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಭಾವಿಸುವುದು ತಪ್ಪು. ಅಲ್ಲಿನ ಸರ್ಕಾರ ಈಗಷ್ಟೇ ರಚನೆಯಾಗಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಖಂಡಿತ ಪಡೆಯಲಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ... ತಾಲಿಬಾನ್ ಬೆದರಿಕೆ: ಪಾಕ್ಗೆ ತೆರಳಿದ ಅಫ್ಗಾನ್ ಫುಟ್ಬಾಲ್ ಆಟಗಾರ್ತಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.