ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ತತ್ವಗಳಿಗೆ ಅನುಗುಣವಾಗಿ ಉಕ್ರೇನ್ನಲ್ಲಿ ‘ಸಮಗ್ರ, ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ’ಯನ್ನು ಆದಷ್ಟು ಬೇಗ ಸ್ಥಾಪಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಯಿತು. ಆದರೆ, ಈ ನಿರ್ಣಯದಿಂದ ಭಾರತವು ದೂರ ಉಳಿಯಿತು.

ಉಕ್ರೇನ್ ಮತ್ತು ಮಿತ್ರರಾಷ್ಟ್ರಗಳು ಈ ನಿರ್ಣಯವನ್ನು ಮಂಡಿಸಿದವು. ‘ಉಕ್ರೇನ್ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ಆಧಾರವಾಗಿರುವ ವಿಶ್ವಸಂಸ್ಥೆಯ ತತ್ವಗಳು’ ಎಂಬ ಶೀರ್ಷಿಕೆಯುಳ್ಳ ಈ ನಿರ್ಣಯವನ್ನು 193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿತು.

ನಿರ್ಣಯದ ಪರವಾಗಿ 141 ಮತಗಳು ಬಂದರೆ, ವಿರುದ್ಧವಾಗಿ 7 ಮತಗಳು ಬಿದ್ದವು. ಭಾರತವೂ ಸೇರಿದಂತೆ ಒಟ್ಟು 32 ದೇಶಗಳು ನಿರ್ಣಯದಿಂದ ದೂರ ಉಳಿದಿದ್ದವು.

ಇದು ಎರಡನೇ ಬಾರಿ

ರಷ್ಯಾ ವಿರುದ್ಧದ ನಿರ್ಣಯದಿಂದ ಭಾರತ ದೂರ ಉಳಿಯುತ್ತಿರುವುದು ಇದು ಎರಡನೇ ಬಾರಿ.

ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಮೂಲಕ ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವುದಕ್ಕೆ ರಷ್ಯಾವನ್ನು ಹೊಣೆ ಮಾಡುವ ಹಾಗೂ ಯುದ್ಧದಿಂದ ಉಕ್ರೇನ್ಗೆ ಆಗಿರುವ ನಷ್ಟ ಹಾಗೂ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆ ದೇಶದ ಮೇಲೆ ಒತ್ತಡ ಹೇರುವ ಕರಡು ನಿರ್ಣಯವನ್ನು 2022ರ ನವೆಂಬರ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಈ ನಿರ್ಣಯದಿಂದ ಭಾರತವು ದೂರ ಉಳಿದಿತ್ತು.

ಇದನ್ನೂ ಓದಿ

ರಷ್ಯಾ ವಿರುದ್ಧದ ಕರಡು ನಿರ್ಣಯ: ದೂರ ಉಳಿದ ಭಾರತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.