ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೆ ತುತ್ತಾಗಿದ್ದ 18 ಸಿಬ್ಬಂದಿಯುಳ್ಳ ಮಾಲ್ಟಾ ದೇಶದ ಹಡಗಿನ ತುರ್ತು ಕರೆಗೆ ತ್ವರಿತವಾಗಿ ಸ್ಪಂದಿಸಿ, ಹಡಗನ್ನು ಪಾರು ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆಯು ಶನಿವಾರ ಹೇಳಿದೆ.

ನೌಕಾಪಡೆಯ ಕಡಲ ಗಸ್ತು ವಿಮಾನ ಮತ್ತು ಆಡೆನ್ ಕೊಲ್ಲಿಯಲ್ಲಿ ಕಡಲ್ಗಳ್ಳತನ ನಿಗ್ರಹ ಗಸ್ತಿನಲ್ಲಿ ತೊಡಗಿರುವ ಯುದ್ಧನೌಕೆಗೆ ಮಾಲ್ಟಾದ ಎಂವಿ ರುಯೆನ್ ಹಡಗಿನಿಂದ ಅಪಾಯದಲ್ಲಿರುವ ಬಗ್ಗೆ ತುರ್ತು ಕರೆ ಬಂದಿತ್ತು. ತಕ್ಷಣವೆ ಆ ಹಡಗನ್ನು ಪತ್ತೆ ಹಚ್ಚಿ ಅದರ ನೆರವಿಗೆ ಧಾವಿಸಲಾಯಿತು ಎಂದು ಅದು ಹೇಳಿದೆ.

ಗುರುವಾರ ಅಪಹರಣ ಯತ್ನ ವರದಿಯಾಗಿದ್ದು, ಭಾರತೀಯ ನೌಕಾಪಡೆಯು ಶುಕ್ರವಾರ ಮುಂಜಾನೆ ಘಟನೆ ನಡೆದ ಪ್ರದೇಶಕ್ಕೆ ತನ್ನ ಯುದ್ಧ ನೌಕೆಯ ಗಸ್ತು ವಿಮಾನವನ್ನು ಕಳುಹಿಸಿತು. ವಿಮಾನವು, ಅಪಹರಣಕ್ಕೊಳಗಾದ ಹಡಗಿನ ಮೇಲೆ ಹಾರಾಟ ನಡೆಸಿ, ಹಡಗಿನ ಚಲನೆಯನ್ನು ನಿರಂತರ ಮೇಲ್ವಿಚಾರಣೆ ಮಾಡುತ್ತಿದೆ. ಆ ಹಡಗು ಈಗ ಸೊಮಾಲಿಯಾದ ಕರಾವಳಿಯತ್ತ ಸಾಗುತ್ತಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.