ನವದೆಹಲಿ: ಕೊರೊನಾ ವೈರಸ್‌ನಿಂದ ತಲ್ಲಣಗೊಂಡಿರುವ ಚೀನಾದ ವುಹಾನ್ ನಗರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ನೀರು ಹಾಗೂ ಆಹಾರಕ್ಕಾಗಿ ಪರದಾಡುವಂತಾಗಿದ್ದು, ತಮ್ಮನ್ನು ಇಲ್ಲಿಂದ ಪಾರು ಮಾಡುವಂತೆ ತಾಯಿನಾಡು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರ, ಅಸ್ಸಾಂ, ದೆಹಲಿ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವುಹಾನ್ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ನೆಲೆಸಿದ್ದಾರೆ. ಕಳೆದ 15 ದಿನಗಳಿಂದಯಾರೂಹೊರಗೆ ಬರದಂತೆ ಅಲ್ಲಿನ ಜನರಿಗೆ ಚೀನಾಸರ್ಕಾರ ಎಚ್ಚರಿಕೆ ನೀಡಿದೆ. ಕೊರೊನಾ ವೈರಸ್ ದಾಳಿಯಿಂದಾಗಿ ಚೀನಾದಲ್ಲಿ ಈಗಾಗಲೇ 132ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು,ಜನರು ಭಯಭೀತರಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಸ್ಥೈರ್ಯ, ಧೈರ್ಯದಿಂದ ಇರುವಂತೆ ಚೀನಾ ಸಂದೇಶಗಳನ್ನು ಕಳುಹಿಸುತ್ತಿದೆ.

ನೀರು ಮತ್ತು ಆಹಾರ ತುಂಬಾ ನಿಯಮಿತವಾಗಿದ್ದುಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ. ತಮಗೆ ಇಲ್ಲಿನ ಡಾರ್ಮೆಟರಿಗಳಲ್ಲಿ ಇರುವಂತೆ ತಿಳಿಸಲಾಗಿದೆ. ದಿನಕ್ಕೆ ಕೇವಲ 2ಗಂಟೆಗಳ ಕಾಲ ಮಾತ್ರ ಹೊರಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಆ 2 ಗಂಟೆಯ ಸಮಯ ಏನೂ ಮಾಡಲು ಆಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಖರೀದಿಸೋಣವೆಂದರೆ ಇಲ್ಲಿನ ಎಲ್ಲಾ ಅಂಗಡಿ, ವ್ಯಾಪಾರ ಮಳಿಗೆಗಳು, ಸಾರಿಗೆ ಸಂಪರ್ಕಬಂದ್ ಆಗಿವೆ. ಇನ್ನೇನು ಕೆಲವೇ ಸಮಯ ನಮಗೆ ಆಹಾರ ಮತ್ತು ನೀರು ಕೂಡ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಮ್ಮನ್ನು ಭಾರತ ಸರ್ಕಾರ ಬೇಗ ಕರೆಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಭಾರತೀಯ ಮೂಲದವಿದ್ಯಾರ್ಥಿ ಗೌರವ್ ನಾಥ್ ತಿಳಿಸಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೆಟೀರಿಯಲ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವ್ಯಾಸಂಗಕ್ಕೆವುಹಾನ್ ವಿಶ್ವ ವಿದ್ಯಾಲಯಕ್ಕೆ ತೆರಳಿರುವ ಎಂಟು ಮಂದಿ ಈಗ ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ. ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ತಮ್ಮ ಸಂಪರ್ಕದಲ್ಲಿದ್ದು, ಭಾರತ ಸರ್ಕಾರ ಆದಷ್ಟು ಬೇಗ ಇಲ್ಲಿಂದ ತಮ್ಮನ್ನು ಪಾರು ಮಾಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ವುಹಾನ್ ನಗರದ ಜನರ ಪರಿಸ್ಥಿತಿ ತುಂಬಾ ಅಯೋಮಯವಾಗಿದೆ. ಅಲ್ಲಿನ ಜನರು ಸರಿಯಾಗಿ ಬೆಳಿಗ್ಗೆ ಎಂಟು ಗಂಟೆಗೆ ಕಿಟಕಿಗಳನ್ನು ತೆಗೆದು 'ವುಹಾನ್ ಕಮಾನ್ ' ಎಂದು ಜೋರಾಗಿ ಘೋಷಣೆಗಳನ್ನು ಕೂಗುತ್ತಾರೆ. ನಂತರ ಬಾಗಿಲು ಹಾಕಿಕೊಂಡರೆ ಮತ್ತೆ ತೆಗೆಯುವುದು ನಾಳೆ ಬೆಳಿಗ್ಗೆ 8 ಗಂಟೆಗೆ. ಮತ್ತೆ ಅದೇ ಘೋಷಣೆ ಕೂಗುತ್ತಾರೆ.

ಈ ಮಧ್ಯೆ ಕೆಲವರುರಾಷ್ಟ್ರಗೀತೆ ಹಾಡಿದರೆ, ಮತ್ತೆ ಕೆಲವರು ಹಳೆಯ ಜನಪ್ರಿಯ ಗೀತೆಗಳನ್ನು ಮನೆಯಲ್ಲಿಯೇ ಕುಳಿತು ಹಾಡುತ್ತಿರುತ್ತಾರೆ. ಅಲ್ಲದೆ, ಧೈರ್ಯದಿಂದ ಇರೋಣ, ಪರಿಸ್ಥಿತಿಯನ್ನು ಎದುರಿಸೋಣ ಎಂಬ ಸಂದೇಶಗಳನ್ನುಮೊಬೈಲ್ಮೂಲಕ ರವಾನಿಸುತ್ತಾರೆ.

ಇದನ್ನೂ ಓದಿ:ಏನಿದು ಕೊರೊನಾ ವೈರಸ್? ಸೋಂಕು ತಿಳಿಯುವುದು ಹೇಗೆ? ಮುನ್ನೆಚ್ಚರಿಕೆ ಕ್ರಮಗಳು ಏನು?

ವಿಮಾನ ಸಿದ್ಧ: ನಾಗರಿಕ ವಿಮಾನಯಾನ ಇಲಾಖೆ

ಈ ಮಧ್ಯೆ ಭಾರತ ಸರ್ಕಾರ ಚೀನಾದಲ್ಲಿರುವ ಭಾರತೀಯರನ್ನು ಕರೆತರಲು ವಿಶೇಷ ವಿಮಾನವೊಂದನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದ್ದು, ಯಾವುದೇ ಸಮಯದಲ್ಲಿ ಚೀನಾಕ್ಕೆ ತೆರಳಲಿದೆ. ನಂತರಅಲ್ಲಿನ ಜನರನ್ನು ಭಾರತಕ್ಕೆ ಸ್ಥಳಾಂತರಿಸುವ ಎಲ್ಲಾ ರೀತಿಯ ಪ್ರಯತ್ನಗಳುನಡೆಯುತ್ತಿವೆಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.

ಈಗಾಗಲೆ ಜಪಾನ್ ತನ್ನ ದೇಶದ 200 ಮಂದಿ, ಅಮೆರಿಕಾ 240 ಮಂದಿಯನ್ನು ವಿಮಾನದ ಮೂಲಕ ಚೀನಾದಿಂದ ಕರೆಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಆದಷ್ಟು ಬೇಗ ಎಲ್ಲರನ್ನೂ ಭಾರತಕ್ಕೆ ಕರೆಸಿಕೊಳ್ಳತ್ತೇವೆ: ವಿದೇಶಾಂಗ ಸಚಿವ ಜೈಶಂಕರ್ಭಾರತ ಸರ್ಕಾರ ಚೀನಾಜೊತೆ ಸತತ ಸಂಪರ್ಕದಲ್ಲಿದೆ. ಅಲ್ಲಿ ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು, ಭಾರತೀಯ ಪ್ರಜೆಗಳನ್ನು ಕರೆತರುವ ಪ್ರಯತ್ನ ಮುಂದುವರಿದಿದೆ. ಅವರೆಲ್ಲರನ್ನೂ ಕರೆಸಿಕೊಳ್ಳುವುದಾಗಿ ಈ ಮೂಲಕ ಭರವಸೆ ನೀಡುತ್ತೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದ್ದಾರೆ.

ಕೊರೊನಾ ಇದೊಂದು ರಾಕ್ಷಸ ವೈರಸ್ : ಚೀನಾ ಅಧ್ಯಕ್ಷ

ಕೊರೊನಾ ಇದೊಂದು ರಾಕ್ಷಸ ವೈರಸ್ ಆಗಿದ್ದು, ಕೋಟಿಗೂ ಹೆಚ್ಚು ಮಂದಿ ಈಗ ಚೀನಾದಲ್ಲಿ ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಈವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮೊದಲು ಈ ರೋಗ ವುಹಾನ್ ನಗರದಲ್ಲಿ ಪತ್ತೆಯಾಗಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ತಿಳಿಸಿದ್ದಾರೆ. ಈಗಾಗಲೇ 132 ಮಂದಿ ಮೃತಪಟ್ಟಿದ್ದು 6 ಸಾವಿರಕ್ಕೂ ಹೆಚ್ಚು ಮಂದಿಗೆ ಈ ವೈರಸ್ ತಗುಲಿದೆ ಎಂದು ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.