ವಾಷಿಂಗ್ಟನ್: ತನ್ನ ಗೂಢಚರ್ಯೆ ತಂತ್ರಜ್ಞಾನವನ್ನು ಬಳಸದಂತೆ ಇಸ್ರೇಲಿ ಸೈಬರ್ ಸೆಕ್ಯುರಿಟಿ ಕಂಪನಿ ಎನ್ಎಸ್ಒ ಕೆಲವು ರಾಷ್ಟ್ರಗಳಿಗೆ ನಿರ್ಬಂಧ ವಿಧಿಸಿದೆ

ಪೆಗಾಸಸ್ ಗೂಢಚರ್ಯೆ ತಂತ್ರಜ್ಞಾನದ ದುರ್ಬಳಕೆ ಕುರಿತು ತನಿಖೆ ನಡೆಸುವ ನಿಟ್ಟಿನಲ್ಲಿ ಎನ್ಎಸ್ಒ ಈ ಕ್ರಮಕೈಗೊಂಡಿದೆ.

ಭಾರತ ಸೇರಿದಂತೆ ಹಲವು ದೇಶಗಳ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಮತ್ತು ಇತರರ ಮೇಲೆ ಕಣ್ಗಾವಲಿಡಲು ಪೆಗಾಸಸ್ ಗೂಢಚರ್ಯೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಇತ್ತೀಚೆಗೆ ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟವೊಂದು ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೆಗಾಸ್ ತನಿಖೆ ಆರಂಭಿಸುತ್ತಿರುವುದರಿಂದ, ಗೂಢಚರ್ಯೆ ತಂತ್ರಜ್ಞಾನ ಬಳಕೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

‘ಕೆಲವು ಗ್ರಾಹಕರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಂಥ ಕೆಲವು ಗ್ರಾಹಕರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ‘ ಎಂದು ಇಸ್ರೇಲಿ ಕಂಪನಿಯ ಮೂಲವೊಂದನ್ನು ಉಲ್ಲೇಖಿಸಿ ನ್ಯಾಷನಲ್ ಪಬ್ಲಿಕ್ ರೇಡಿಯೊ ವರದಿ ಮಾಡಿದೆ. ಆದರೆ, ಎಷ್ಟು ಸರ್ಕಾರಿ ಸಂಸ್ಥೆಗಳನ್ನು ಅಥವಾ ಯಾವ ಕಂಪನಿಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಎಸ್ಒ, ಆಂತರಿಕ ತನಿಖೆ ನಡೆಸುತ್ತಿದೆ. ಕಂಪನಿಯ ಪ್ರಮುಖ ಗ್ರಾಹಕರೆಂದು ಗುರುತಿಸಿ, ಅವರೊಂದಿಗೆ ಸಂವಹನ ನಡೆಸಿರುವ ದೂರವಾಣಿ ಸಂಖ್ಯೆಗಳನ್ನು ಪರಿಶೀಲಿಸಿದೆ.

‘ನಾವು ಎಲ್ಲ ದೂರವಾಣಿ ಸಂಖ್ಯೆಗಳನ್ನೂ ಪರಿಶೀಲಿಸಿದ್ದೇವೆ. ಅವುಗಳಿಗೂ ಪೆಗಾಸಸ್ಗೂ ಯಾವುದೇ ಸಂಪರ್ಕವಿಲ್ಲ ಎಂದು ಗೊತ್ತಾಗಿದೆ‘ ಎಂದು ತಿಳಿಸಿದ ಎನ್ಎಸ್ಒ ಸಿಬ್ಬಂದಿ, ಈ ಹಗರಣದಲ್ಲಿ ಕಂಪನಿಯನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಮಾಹಿತಿ ನೀಡಲು ಅವರು ನಿರಾಕರಿಸಿದರು.

‘ಪೆಗಾಸಸ್ ಹಗರಣಕ್ಕೆ ಸಂಬಂಧಿಸಿದಂತೆ ಎನ್ಎಸ್ಒ ಇನ್ನು ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಇದು ಕೆಟ್ಟ ಮತ್ತು ಅಪಪ್ರಚಾರಕ್ಕೆ ದಾರಿ ಮಾಡಿಕೊಡುತ್ತದೆ‘ ಎಂದು ಹೆಸರು ಹೇಳಲಿಚ್ಛಿಸದ ಕಂಪನಿ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ತಿರುವನಂತಪುರ: ಸೌದಿಗೆ ಹೊರಟಿದ್ದ ವಿಮಾನದ ಕಿಟಕಿಯಲ್ಲಿ ಬಿರುಕು, ತುರ್ತು ಭೂಸ್ಪರ್ಶ

ಈ ಎಲ್ಲ ಬೆಳವಣಿಗೆಗಳ ನಡುವೆ, ವಿದೇಶಗಳಿಗೆ ಪೆಗಾಸಸ್ ಗೂಢಚರ್ಯೆ ತಂತ್ರಜ್ಞಾನ ಮಾರಾಟ ಮಾಡುವುದರ ಮೇಲೆ ನಿಯಂತ್ರಣ ಹೇರಿದ ನಂತರ, ಇಸ್ರೇಲ್ ಸರ್ಕಾರ ಒತ್ತಡವನ್ನೂ ಎದುರಿಸಬೇಕಾಯಿತು.

ನಂತರದ ಬೆಳವಣಿಗೆಯಲ್ಲಿ, ಎನ್ಎಸ್ಒ ಕಂಪನಿ ವಿರುದ್ಧ ಕೇಳಿಬಂದ ಆರೋಪದ ಕುರಿತು ಇಸ್ರೇಲ್ ಸರ್ಕಾರ ತನಿಖೆ ನಡೆಸುತ್ತಿದೆ. ಪೆಗಾಸಸ್ ಗೂಢಚರ್ಯೆ ಹಗರಣದಲ್ಲಿ ಆರೋಪ ಕೇಳಿ ಬಂದ ನಂತರ ಇಸ್ರೇಲಿ ಅಧಿಕಾರಿಗಳು, ಟೆಲ್ ಅವಿವ್ ಸಮೀಪದಲ್ಲಿರುವ ಹೇರ್ಝಿಲಿಯಾದ ಎನ್ಎಸ್ಒ ಕಚೇರಿಯನ್ನು ಪರಿಶೀಲಿಸಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.