ಮೆಲ್ಬರ್ನ್: ಆಸ್ಟ್ರೇಲಿಯಾಕ್ಕೆಭಾರತ ಸರ್ಕಾರವು ಉಡುಗೊರೆಯಾಗಿ ನೀಡಿದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂಬುದು ವರದಿಯಾಗಿದೆ.

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಘಟನೆಯನ್ನು ಖಂಡಿಸಿದ್ದು, 'ಈ ಕೃತ್ಯ ಅವಮಾನಕರವಾಗಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ಸಮುದಾಯದಲ್ಲಿ ಆಘಾತ ಮತ್ತು ಅತೀವ ಬೇಸರವನ್ನು ಉಂಟು ಮಾಡಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೈಡನ್–ಜಿನ್ಪಿಂಗ್ ಮೊದಲ ವರ್ಚುವಲ್ ಸಭೆ:ಸ್ಪರ್ಧೆಯ ನಿರ್ವಹಣೆ ಬಗ್ಗೆ ಚರ್ಚೆ

ಭಾರತದ 75ನೇ ವರ್ಷಗಳ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ಶುಕ್ರವಾರ ವಿಕ್ಟೋರಿಯಾದ ರೋವಿಲ್ನಲ್ಲಿ ಆಸ್ಟ್ರೇಲಿಯಾದ ಭಾರತೀಯ ಸಮುದಾಯಕೇಂದ್ರದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿದ ಕೆಲವೇ ಗಂಟೆಗಳ ಬಳಿಕ ಈ ಘಟನೆ ಸಂಭವಿಸಿದೆ ಎಂದು 'ದಿ ಏಜ್' ಪತ್ರಿಕೆ ವರದಿ ಮಾಡಿದೆ.

'ಈ ರೀತಿಯ ಅಗೌರವವನ್ನು ನೋಡುವುದು ಅವಮಾನಕರ ಮತ್ತು ತುಂಬಾನೇ ಬೇಸರವಾಗಿದೆ' ಎಂದು ಮಾರಿಸನ್ ತಿಳಿಸಿದ್ದಾರೆ.

'ದೇಶದಲ್ಲಿ ಸಾಂಸ್ಕೃತಿಕ ಸ್ಮಾರಕಗಳ ಮೇಲಿನ ದಾಳಿಯನ್ನು ಸಹಿಸಲಾಗುವುದಿಲ್ಲ. ಇದಕ್ಕೆ ಕಾರಣರಾದವರು ಯಾರೇ ಆದರೂ ಆಸ್ಟ್ರೇಲಿಯಾದ ಭಾರತೀಯ ಸಮುದಾಯಕ್ಕೆ ಅಗೌರವವನ್ನು ತೋರಿದ್ದಾರೆ. ಅವರಿಗೆ ನಾಚಿಕೆಯಾಗಬೇಕು' ಎಂದು ಹೇಳಿದ್ದಾರೆ.

ಘಟನೆಯನ್ನು ಭಾರತೀಯ ಸಮುದಾಯವು ಸಹ ಬಲವಾಗಿ ಖಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.