ಕರಾಚಿ (ಪಾಕಿಸ್ತಾನ): ಬಲೂಚಿಸ್ತಾನ ಪ್ರಾಂತ್ಯದಲ್ಲಿ 9 ಬಸ್ ಪ್ರಯಾಣಿಕರು ಸೇರಿದಂತೆ 11 ಜನರನ್ನು ಉಗ್ರರು ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೊದಲ ಘಟನೆಯಲ್ಲಿ, ಶಸ್ತ್ರಸಜ್ಜಿತ ವ್ಯಕ್ತಿಗಳು ನೋಶ್ಕಿ ಜಿಲ್ಲೆಯ ಹೆದ್ದಾರಿಯಲ್ಲಿ ಬಸ್ ಅನ್ನು ನಿಲ್ಲಿಸಿ, ಬಂದೂಕು ತೋರಿಸಿ 9 ಜನರನ್ನು ಅಪಹರಿಸಿದ್ದಾರೆ. ಈ 9 ಜನರ ಮೃತ ದೇಹಗಳು ಸೇತುವೆಯ ಸಮೀಪದ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿವೆ. ಅವರ ದೇಹಗಳ ಮೇಲೆ ಗುಂಡಿನ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ವೆಟ್ಟಾದಿಂದ ತಫ್ತಾನ್‌ಗೆ ಹೋಗುತ್ತಿದ್ದಾಗ ಬಸ್ ಅನ್ನು ತಡೆದ ಉಗ್ರರು, ಬಂದೂಕು ತೋರಿಸಿ 9 ಜನರನ್ನು ಪರ್ವತ ಪ್ರದೇಶಗಳಿಗೆ ಕರೆದೊಯ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ಅದೇ ಹೆದ್ದಾರಿಯಲ್ಲಿ ಕಾರಿನ ಮೇಲೆ ಗುಂಡು ಹಾರಿಸಲಾಗಿದ್ದು, ಇಬ್ಬರು ಪ್ರಯಾಣಿಕರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

'ನೋಶ್ಕಿ ಹೆದ್ದಾರಿಯಲ್ಲಿ 11 ಜನರನ್ನು ಹತ್ಯೆಗೈದ ಭಯೋತ್ಪಾದಕರನ್ನು ಕ್ಷಮಿಸುವುದಿಲ್ಲ. ಶೀಘ್ರದಲ್ಲೇ ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುವುದು' ಎಂದು ಬಲೂಚಿಸ್ತಾನದ ಮುಖ್ಯಮಂತ್ರಿ ಮಿರ್ ಸರ್ಫರಾಜ್ ಬುಗ್ತಿ ಹೇಳಿದ್ದಾರೆ. ಬಲೂಚಿಸ್ತಾನದಲ್ಲಿ ಶಾಂತಿಯನ್ನು ಕದಡುವುದು ಅವರ ಗುರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಮೊಹ್ಸಿನ್ ನಖ್ವಿ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಮೃತರ ಕುಟುಂಬದವರ ಜೊತೆಗೆ ಸರ್ಕಾರ ನಿಂತಿದೆ ಎಂದಿದ್ದಾರೆ.

ಉಗ್ರ ರಬ್ಬಾನಿ ಹತ್ಯೆ

ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನೆಯು ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆಯ ಮುಖಂಡ ಸಲೀಂ ಅಲಿಯಾಸ್ ರಬ್ಬಾನಿ ಸೇರಿದಂತೆ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. ಮತ್ತಿಬ್ಬರು ಉಗ್ರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
.ಬಾರಾಮುಲ್ಲಾ: ಗಡಿಯಲ್ಲಿ ಒಳನುಸುಳುವ ಸಂಚು ವಿಫಲಗೊಳಿಸಿದ ಸೇನೆ- ಭಯೋತ್ಪಾದಕನ ಹತ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.