ಜಿನೀವಾ: ಚೀನಾದ ಸಂಶೋಧಕರು ದಕ್ಷಿಣ ಆಫ್ರಿಕಾದ ಬಾವಲಿಗಳಲ್ಲಿ 'ನಿಯೊಕೋವ್' ಎಂಬ ಹೊಸ ರೀತಿಯ ಕೊರೊನಾ ವೈರಸ್ ಪತ್ತೆ ಹಚ್ಚಿದ್ದಾರೆ.

ಇದು ರೂಪಾಂತರಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದರೂ ಅದರ ಅಪಾಯ ಸಾಮರ್ಥ್ಯದ ಬಗ್ಗೆ ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:‘ಬಾವಲಿಯಲ್ಲಿ ‘ನಿಯೊಕೋವ್’ ಕೊರೊನಾ ವೈರಸ್ ಪತ್ತೆ’

ಚೀನಾದ ವುಹಾನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಪ್ರಕಾರ, ಸಾರ್ಸ್-ಕೋವ್-2 ( SARS-CoV-2) ರೀತಿಯಲ್ಲಿಯೇ ನಿಯೊಕೋವ್ ಮಾನವ ಜೀವಕೋಶಗಳಿಗೆ ಹಾನಿಕಾರಕವಾಗುವ ಭೀತಿಯಿದೆ.

ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಎಂಇಆರ್‌ಎಸ್) ಎಂಬ ಉಸಿರಾಟ ತೊಂದರೆ ಕಾಯಿಲೆಗೆ ಕಾರಣವಾಗುವ ವೈರಸ್‌ಗೆ ಇರುವಂತಹ ಗುಣಲಕ್ಷಣಗಳನ್ನೇ ನಿಯೊಕೋವ್ ವೈರಾಣು ಹೊಂದಿದೆ.

ಮನುಷ್ಯರಿಗೆ ಅಪಾಯವೊಡ್ಡಬಲ್ಲ ಈ ವೈರಾಣು, ಕೇವಲ ಒಂದು ರೂಪಾಂತರದಷ್ಟು ದೂರದಲ್ಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಮನುಷ್ಯರಲ್ಲಿ ನಿಯೊಕೋವ್ಅಪಾಯಕಾರಿಯೇ ಎಂಬುದರ ಕುರಿತು ಮತ್ತಷ್ಟು ಅಧ್ಯಯನದ ಅಗತ್ಯವಿದೆ. ಈ ನಿಟ್ಟಿನಲ್ಲಿ ವರ್ಲ್ಡ್ ಆರ್ಗನೈಸೇಷನ್ ಫಾರ್ ಅನಿಮಲ್ ಹೆಲ್ತ್ (ಒಐಇ), ಫುಡ್ ಆ್ಯಂಡ್ ಅರ್ಗಿಕಲ್ಚರ್ ಆರ್ಗನೈಸೇಷನ್ (ಎಫ್‌ಎಒ) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ಜೊತೆ ನಿಕಟವಾಗಿ ಕೆಲಸ ನಿರ್ವಹಿಸಲಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಮನುಷ್ಯರಲ್ಲಿ ಕಂಡುಬರುತ್ತಿರುವ ಶೇ 75ಕ್ಕಿಂತ ಹೆಚ್ಚು ಸಾಂಕ್ರಾಮಿಕ ರೋಗಗಳ ಮೂಲ ಕಾಡು ಪ್ರಾಣಿಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.