ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತು ಮತ್ತು ಅದರ ನಾಲ್ಕು ಪ್ರಾಂತೀಯ ಅಸೆಂಬ್ಲಿಗಳಿಗೆ ಫೆಬ್ರುವರಿ 8 ರಂದು ನಡೆಯಲಿರುವ ಚುನಾವಣೆಗೆ 22,711 ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾ ಆಯೋಗ ಸೋಮವಾರ ಪ್ರಾಥಮಿಕ ಪರಿಶೀಲನೆಯ ನಂತರ ಅಂಗೀಕರಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಚುನಾವಣಾ ಆಯೋಗದ (ECP) ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ ಮಾಹಿತಿಯ ಪ್ರಕಾರ, 7,028 ಪುರುಷ ಮತ್ತು 445 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 7,473 ಅಭ್ಯರ್ಥಿಗಳು ಸಂಸತ್ತಿನ ಕೆಳಮನೆಯಾದ ರಾಷ್ಟ್ರೀಯ ಸಂಸತ್ತಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಆ ಪೈಕಿ 6,094 ಪುರುಷ ಮತ್ತು 355 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 6,449 ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ಅಂಗೀಕರಿಸಿದ್ದಾರೆ. ಉಳಿದಂತೆ 934 ಪುರುಷರು ಮತ್ತು 90 ಮಹಿಳೆಯರು ಸೇರಿದಂತೆ 1,024 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ.

ತಿರಸ್ಕೃತ ಅಭ್ಯರ್ಥಿಗಳ ಮಾಹಿತಿಯನ್ನು ವಿವರವಾಗಿ ನೀಡಲಾಗಿಲ್ಲ. ಆದರೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬಹುಪಾಲು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ ಎಂದು ಹೇಳಿಕೊಂಡಿದೆ.

ಅದೇ ರೀತಿ, ನಾಲ್ಕು ಪ್ರಾಂತೀಯ ಅಸೆಂಬ್ಲಿಗಳಿಗೆ 17,670 ಪುರುಷರು ಮತ್ತು 808 ಮಹಿಳೆಯರು ಸೇರಿದಂತೆ 18,478 ಅಭ್ಯರ್ಥಿಗಳು ನಾಮಪತ್ರ ಸಲ್ಲಿದ್ದರು. ಆ ಪೈಕಿ 16,262 ನಾಮಪತ್ರಗಳನ್ನು ಆರ್ಒಗಳು ಅನುಮೋದಿಸಿದ್ದಾರೆ. ಉಳಿದಂತೆ 2,081 ಪುರುಷರು ಮತ್ತು 135 ಮಹಿಳೆಯರು ಸೇರಿದಂತೆ 2,216 ಅಭ್ಯರ್ಥಿಗಳ ನಾಮಪತ್ರಗಳು ಅನುಮೋದನೆಗೊಂಡಿಲ್ಲ.

ಒಟ್ಟಾರೆಯಾಗಿ, ರಾಷ್ಟ್ರೀಯ ಸಂಸತ್ತು ಮತ್ತು ನಾಲ್ಕು ಪ್ರಾಂತೀಯ ಅಸೆಂಬ್ಲಿಗಳ 1,085 ಸಾಮಾನ್ಯ ಸ್ಥಾನಗಳಿಗೆ 22,711 ನಾಮಪತ್ರಗಳನ್ನು ಅನುಮೋದಿಸಲಾಗಿದೆ. ಅವರಲ್ಲಿ 21,684 ಪುರುಷರು ಮತ್ತು 1,027 ಮಹಿಳೆಯರು ಸೇರಿದ್ದಾರೆ.

ಒಟ್ಟು 25,951 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 3,015 ಪುರುಷ ಅಭ್ಯರ್ಥಿಗಳು ಮತ್ತು 225 ಮಹಿಳೆಯರು ಸೇರಿದಂತೆ 3,240 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ತಿಳಿಸಿದೆ.
.ಪಾಕಿಸ್ತಾನ: ಫೆ.8ರಂದು ಸಾರ್ವತ್ರಿಕ ಚುನಾವಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.