ಇಸ್ಲಾಮಾಬಾದ್: ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ವಿಶ್ವಾಸ ಮತ ಗಳಿಸಿದ್ದಾರೆ.

342 ಸದಸ್ಯರನ್ನೊಳಗೊಂಡ ಸಂಸತ್ತಿನ ಕೆಳಮನೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್ 178 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು.

ವಿಶ್ವಾಸಮತ ಯಾಚಿಸಲು ವಿಶೇಷ ಅಧಿವೇಶನವನ್ನು ಶನಿವಾರ ಕರೆಯಲಾಗಿತ್ತು. ಆದರೆ, 11 ಪಕ್ಷಗಳ ಮೈತ್ರಿಕೂಟ ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಬಹಿಷ್ಕಾರ ಹಾಕಿತ್ತು. ಹೀಗಾಗಿ, ವಿರೋಧ ಪಕ್ಷಗಳ ಸದಸ್ಯರು ಗೈರುಹಾಜರಿಯಲ್ಲಿ ಇಮ್ರಾನ್ ಖಾನ್ ಬಹುಮತ ಸಾಬೀತುಪಡಿಸಿದರು.

ವಿಶ್ವಾಸಮತ ಏಕೆ?

ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರು ಬುಧವಾರ ನಡೆದ ಸೆನೆಟ್ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರಿಂದ ಇಮ್ರಾನ್ ಖಾನ್ ವಿಶ್ವಾಸ ಮತಯಾಚಿಸಿದರು. ಶೇಖ್ ಸೋಲು ಅನುಭವಿಸಿದ ಬಳಿಕ ಇಮ್ರಾನ್ ಖಾನ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

ಹೆಚ್ಚಿನ ಮಾಹಿತಿ ಈ ಸುದ್ದಿ ಓದಿ:ಇಂದು ವಿಶ್ವಾಸಮತ ಯಾಚಿಸಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.