ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಅವರು ಗಲ್ಲು ಶಿಕ್ಷೆಗೂ ಮುನ್ನ ಮೃತಪಟ್ಟರೆಮೃತದೇಹವನ್ನು ಎಳೆದುತಂದು ಸಂಸತ್ ಎದುರು 3 ದಿನ ನೇತುಹಾಕಲು ಆದೇಶ ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ವಜಾಗೆ ಪಾಕಿಸ್ತಾನ ಸರ್ಕಾರ ಆಗ್ರಹಿಸಿದೆ.

ಈ ಕುರಿತು ಸುಪ್ರೀಂ ನ್ಯಾಯಿಕ ಮಂಡಳಿಗೆ ಮನವಿ ಸಲ್ಲಿಸಲಿರುವ ಸರ್ಕಾರ, ‘ಮಾನಸಿಕ ಸ್ಥಿಮಿತ’ ಕಳೆದುಕೊಂಡಿರುವ ನ್ಯಾಯಾಧೀಶರ ವಜಾಗೆ ಆಗ್ರಹಸಿದೆ.

ಆದೇಶದಲ್ಲೇನಿತ್ತು? : ತ್ರಿಸದಸ್ಯ ಪೀಠದ 167 ಪುಟಗಳ ವಿಸ್ತೃತ ಆದೇಶದಲ್ಲಿ ‘ಅಪರಾಧಿಯನ್ನು ನೇಣಿಗೆ ಹಾಕಬೇಕು. ನಂತರ ಮೃತದೇಹವನ್ನು ಇಸ್ಲಾಮಾಬಾದ್ ಡಿ–ಚೌಕ್ಗೆ ಎಳೆದೊಯ್ದು 3 ದಿನ ನೇತುಹಾಕಬೇಕು’ ಎಂದು ಪೇಶಾವರ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಕಾರ್ ಅಹಮ್ಮದ್ ಸೇಠ್ ಉಲ್ಲೇಖಿಸಿದ್ದರು.ಈ ಆದೇಶ ಹೊರಬಿದ್ದ ತಕ್ಷಣವೇ ಕಾನೂನು ಸಲಹೆಗಾರರ ಜೊತೆ ಸಭೆ ನಡೆಸಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಈ ಆದೇಶ ಪ್ರಶ್ನಿಸಲು ಸಭೆಯಲ್ಲಿ ನಿರ್ಧರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.