ವಾಷಿಂಗ್ಟನ್:‘ಭಾರತ ಮತ್ತು ಆಸ್ಟ್ರೇಲಿಯಾವು ಕಡಿಮೆ ವಾಯುಮಾಲಿನ್ಯ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಹಭಾಗಿತ್ವಕ್ಕೆ ಒಪ್ಪಿಕೊಂಡಿವೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಗುರುವಾರ ಸಂಜೆ ನಡೆದ ಸಭೆಯ ನಂತರ ಅವರು ಈ ಮಾತು ಹೇಳಿದ್ದಾರೆ. ‘ನನ್ನ ಆತ್ಮೀಯ ಗೆಳೆಯ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಈಗಷ್ಟೇ ಮಾತುಕತೆ ಮುಗಿಸಿಬಂದಿದ್ದೇನೆ. ನಾವು ಈ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಇವತ್ತಿನ ಸಭೆಯಲ್ಲಿ ಅತ್ಯಂತ ಮಹತ್ವದ ಕಾರ್ಯಕ್ರಮಗಳ ಬಗ್ಗೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ. ಅತ್ಯಂತ ಅಗ್ಗದ ಸೌರಶಕ್ತಿ ಕಾರ್ಯಕ್ರಮದಲ್ಲಿ ಸಹಭಾಗಿತ್ವಕ್ಕೂ ಒಪ್ಪಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಓದಿ:ಅಜ್ಜನ ವಸ್ತುಗಳು ಮೊಮ್ಮಗಳಿಗೆ: ಕಮಲಾ ಹ್ಯಾರಿಸ್ಗೆ ಮೋದಿ ವಿಭಿನ್ನ ಉಡುಗೊರೆ

ಹವಾಮಾನ ವೈಪರೀತ್ಯವನ್ನು ತಡೆಗಟ್ಟಲು ಬೇರೆ ದೇಶಗಳಿಗೂ ನೆರವಾಗಬೇಕಿದೆ. ಈ ದಿಸೆಯಲ್ಲಿ ಅತ್ಯಂತ ಕಡಿಮೆ ವಾಯುಮಾಲಿನ್ಯದ ಜಲಜನಕದ ಸೆಲ್ ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.

ಮುಕ್ತ ಸಮುದ್ರಯಾನಕ್ಕೆ ಒತ್ತು :ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಯೊಶಿಹಿಡೆ ಸುಗಾ ಅವರು ಗುರುವಾರ ಮಾತುಕತೆ ನಡೆಸಿದ್ದಾರೆ. ಹಿಂದೂಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ಸಮುದ್ರಯಾನದ ಅವಕಾಶವನ್ನು ರಕ್ಷಿಸಿಕೊಳ್ಳಬೇಕು ಎಂದು ಇಬ್ಬರೂ ನಾಯಕರು ಸಭೆಯಲ್ಲಿ ಪ್ರತಿಪಾದಿಸಿದ್ದಾರೆ.

ಈ ಪ್ರದೇಶದಲ್ಲಿ ಯಾವುದೇ ದೇಶವು ಆರ್ಥಿಕ ಏಕಸ್ವಾಮ್ಯ ಮತ್ತು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವು ದನ್ನು ನಾವು ವಿರೋಧಿಸುತ್ತೇವೆ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಕ್ಷಣಾ ಸಹಕಾರ ಮತ್ತು ರಕ್ಷಣಾ ತಂತ್ರಜ್ಞಾನ ಹಂಚಿಕೆಗೆ ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಮಾಹಿತಿ ನೀಡಿದೆ.

ಓದಿ:ಭಾರತದೊಂದಿಗಿನ ಬಾಂಧವ್ಯ ಬಲವರ್ಧನೆಗೆ ಫ್ರಾನ್ಸ್– ಅಮೆರಿಕ ಆಸಕ್ತಿ: ಬ್ಲಿಂಕನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.