ಮಾಸ್ಕೊ: 2024ರ ಬಳಿಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯೋಜನೆಯಿಂದ ಹೊರಬರಲು ಮತ್ತು ತನ್ನದೇ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದತ್ತ ಗಮನ ಕೇಂದ್ರೀಕರಿಸಲು ರಷ್ಯಾ ನಿರ್ಧರಿಸಿದೆ.

ರಷ್ಯಾದ ಬಾಹ್ಯಾಕಾಶ ನಿಗಮ ‘ರಾಸ್‌ಕಾಸ್ಮೋಸ್’ನ ನೂತನ ಮುಖ್ಯಸ್ಥ ಯೂರಿ ಬೋರಿಸೋವ್ ಅವರುಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದ್ದಾರೆ.

ಯೋಜನೆಯಿಂದ ಹೊರಗೆ ಹೋಗುವ ಮೊದಲು ತನ್ನ ಪಾಲುದಾರರಿಗೆ ನೀಡಿರುವ ಬದ್ಧತೆಯನ್ನು ರಷ್ಯಾ ಪೂರ್ತಿಗೊಳಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಆತಂಕ ಬೇಡ: ಮಂಕಿಪಾಕ್ಸ್ಗೆ ಚಿಕಿತ್ಸೆ ಏನು? ಮುನ್ನೆಚ್ಚರಿಕೆ ಕ್ರಮಗಳೇನು?

ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಭಾರಿ ನಿರ್ಬಂಧ ವಿಧಿಸಿವೆ. ಇದನ್ನು ವಿರೋಧಿಸಿ ರಷ್ಯಾವು ಕೆಲವು ತಿಂಗಳ ಹಿಂದೆಯೇ ಬಾಹ್ಯಾಕಾಶ ನಿಲ್ದಾಣವನ್ನು ತೊರೆಯುವ ತನ್ನ ಇಂಗಿತವನ್ನು ತಿಳಿಸಿತ್ತು, ಇದೀಗ ಅದನ್ನು ದೃಢಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.