ವಿಶ್ವಸಂಸ್ಥೆ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿ ಮತ್ತು ಪ್ರಜೆಗಳು ಸ್ವದೇಶಕ್ಕೆ ಮರಳಲು 'ಸುರಕ್ಷಿತ ಮತ್ತು ತಡೆರಹಿತ' ಮಾರ್ಗಕ್ಕೆ ಭಾರತ ಒತ್ತಾಯಿಸಿದೆ.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ಕುರಿತಾದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದಿಂದ ಭಾರತ ದೂರ ಉಳಿದಿದೆ. ಮಾತುಕತೆ ಮತ್ತು ರಾಜತಾಂತ್ರಿಕ ನಡೆಯಿಂದಷ್ಟೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯ ಎಂದು ಪುನಃ ಒತ್ತಿ ಹೇಳಿದ್ದು, ಯುದ್ಧ ವಿರಾಮಕ್ಕೆ ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.

'ಉಕ್ರೇನ್ನಲ್ಲಿ ಪರಿಸ್ಥಿತಿಯು ತೀವ್ರವಾಗಿ ಹದಗೆಡುತ್ತಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತದೆ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.

ವಿಡಿಯೊ: ಹಾರ್ಕಿವ್ನ ಫ್ರೀಡಮ್ ಸ್ಕ್ವೇರ್ಗೆ ಅಪ್ಪಳಿಸಿದ ರಷ್ಯಾದ ಕ್ಷಿಪಣಿ

ಹಾರ್ಕಿವ್ನಲ್ಲಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ವಿಚಾರವನ್ನು ಪ್ರಸ್ತಾಪಿಸಿದ ತಿರುಮೂರ್ತಿ, 'ಪ್ರಸ್ತುತ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತದ ವಿದ್ಯಾರ್ಥಿ ಹಾರ್ಕಿವ್ನಲ್ಲಿ ಮೃತ ಪಟ್ಟಿರುವುದು ದುರುಂತ. ನವೀನ್ ಅವರ ಸಾವಿಗೆ ತೀವ್ರ ಸಂತಾಪಗಳನ್ನು ಸೂಚಿಸುತ್ತಿದ್ದೇವೆ. ಹಾರ್ಕಿವ್ ಮತ್ತು ಉಕ್ರೇನ್ನಇತರ ಪ್ರದೇಶಗಳಲ್ಲಿ ಸಿಲುಕಿರುವ ಭಾರತದ ಎಲ್ಲ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಮತ್ತು ತಡೆರಹಿತವಾಗಿ ತಾಯ್ನಾಡಿ ವಾಪಸ್ ಆಗುವುದನ್ನು ಬಯಸುತ್ತೇವೆ' ಎಂದು ತಿಳಿಸಿದರು.

ರಷ್ಯಾ ವಿರುದ್ಧದ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ 141 ಮತ: ಭಾರತ, ಚೀನಾ ನಿರ್ಲಪ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.