ವಾಷಿಂಗ್ಟನ್: ಭಾರತದಲ್ಲಿ 2022ರಲ್ಲಿ ಕಾನೂನುಬಾಹಿರ ಹಾಗೂ ಬೇಕಾಬಿಟ್ಟಿ ಹತ್ಯೆಗಳು, ಪತ್ರಿಕಾ ಸ್ವಾತಂತ್ರದ ದಮನ, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಿಂಸಾಚಾರಗಳಂತಹ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳು ನಡೆದಿದ್ದವು ಎಂದು ಅಮೆರಿಕ ಬಿಡುಗಡೆ ಮಾಡಿದ ವರದಿಯೊಂದು ತಿಳಿಸಿದೆ.

ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರು ಈ ವರದಿ ಬಿಡುಗಡೆ ಮಾಡಿದ್ದು, ರಷ್ಯಾ ಮತ್ತು ಚೀನಾಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗಿದೆ ಎಂದು ದೂರಲಾಗಿದೆ.

2022ರಲ್ಲಿ ಭಾರತದಲ್ಲಿ ಕಾನೂನುಬಾಹಿರ ಹತ್ಯೆಗಳು, ಚಿತ್ರಹಿಂಸೆಗಳು, ಪೊಲೀಸರಿಂದ ಅಮಾನವೀಯ ರೀತಿಯಲ್ಲಿ ಶಿಕ್ಷೆಗಳು ದಾಖಲಾಗಿವೆ. ಜೈಲುಗಳಲ್ಲಿನ ಜೀವ ಹಿಂಡುವ ಪರಿಸ್ಥಿತಿಗಳೂ ಇದ್ದವು ಎಂದು ವರದಿ ಹೇಳಿದೆ.

ಏಕಪಕ್ಷೀಯ ಬಂಧನಗಳು, ರಾಜಕೀಯ ನಾಯಕರ ಖಾಸಗಿ ಜೀವನದಲ್ಲಿ ಹಸ್ತಕ್ಷೇಪ, ಮಾಧ್ಯಮಗಳ ಮುಕ್ತ ಅಭಿವೃಕ್ತಿಗೆ ನಿರ್ಬಂಧ, ಪತ್ರಕರ್ತರ ಕಾನೂನುಬಾಹಿರ ಬಂಧನಗಳು, ಅಭಿವೃಕ್ತಿಯನ್ನು ಹತ್ತಿಕ್ಕಲು ಕ್ರಿಮಿನಲ್ ಕಾನೂನುಗಳನ್ನು ಹೇರುವ ಬೆದರಿಕೆಗಳಂತಹ ಮಾನವ ಹಕ್ಕು ಉಲ್ಲಂಘನೆಗಳು ಭಾರತದಲ್ಲಿ ನಡೆದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಸಹ ಅಮೆರಿಕ ಇಂತಹ ವರದಿಗಳನ್ನು ಬಿಡುಗಡೆ ಮಾಡಿದ್ದು, ಭಾರತ ಅವುಗಳನ್ನು ಅಲ್ಲಗಳೆಯುತ್ತ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.