ಅಸ್ತಾನ: ಕಜಕಿಸ್ತಾನಕ್ಕೆ ಭೇಟಿ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಲ್ಲಿನ ಭಾರತೀಯ ಸಮುದಾಯದವರ ಜೊತೆ ಸಂವಾದ ನಡೆಸಿದ್ದಾರೆ.

‘ಕಜಕಿಸ್ತಾನದ ರಾಜಧಾನಿ ಅಸ್ತಾನವು ವಿಶ್ವದ ಎರಡನೇ ಅತಿ ಶೀತ ರಾಜಧಾನಿ. ಆದರೆ ಇಲ್ಲಿನ ಜನರ ಆತ್ಮೀಯತೆ ಕಂಡಾಗ ಶೀತದ ಅನುಭವವಾಗುವುದಿಲ್ಲ’ ಎಂದು ಈ ವೇಳೆ ಸುಷ್ಮಾ ಹೇಳಿದ್ದಾರೆ.

ಕಜಕಿಸ್ತಾನದ ವಿದೇಶಾಂಗ ಸಚಿವ ಕೈರಾತ್ ಅಬ್ದುರಖ್ಮನೊವ್ ಅವರನ್ನು ಭೇಟಿಯಾಗಿರುವ ಸುಷ್ಮಾ ಅವರು ವ್ಯಾಪಾರ, ಹೂಡಿಕೆ, ಇಂಧನ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಮೂರು ದೇಶಗಳ ಪ್ರವಾಸದಲ್ಲಿರುವ ಸಚಿವೆ ಕಿರ್ಗಿಸ್ತಾನ ಹಾಗೂ ಉಜ್ಬೇಕಿಸ್ತಾನಕ್ಕೂ ಭೇಟಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.