ಲಂಡನ್: ಬಿಜೆಪಿ ವಿರುದ್ಧ ತನಿಖಾ ವರದಿ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದ ಭಾರತೀಯ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಶೌರ್ಯ ಪ್ರದರ್ಶನಕ್ಕಾಗಿ ನೀಡಲಾಗುವ 2018ರ ಲಂಡನ್ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಅವರ ‘ಐ ಆ್ಯಮ್ ಎ ಟ್ರೋಲ್: ಇನ್‌ಸೈಡ್ ದಿ ಸೀಕ್ರೆಟ್ ವರ್ಲ್ಡ್ ಆಫ್ ದಿ ಬಿಜೆಪಿ’ಸ್ ಡಿಜಿಟಲ್ ಆರ್ಮಿ’ ಕೃತಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ.

ಆಡಳಿತಾರೂಢ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕವು ಯಾವ ರೀತಿಯಲ್ಲಿ ದ್ವೇಷಮಯ ಟ್ರೋಲ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದೆ ಎಂಬುದನ್ನು ಸ್ವಾತಿ ತಮ್ಮ ಕೃತಿಯಲ್ಲಿ ಬಹಿರಂಗಗೊಳಿಸಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ವಾತಿ, ‘ಈ ಪ್ರಶಸ್ತಿಯ ಹಿಂದೆ ಬಹಳಷ್ಟು ವಿಷಯಗಳು ಅಡಗಿವೆ. ಆದರೆ, ನನ್ನ ಕರ್ತವ್ಯ ನಾನು ಮಾಡಿದ್ದಕ್ಕೆ ಶೌರ್ಯ ಪ್ರಶಸ್ತಿ ಪಡೆಯಬೇಕಾಗಿರುವುದು ಖೇದಕರ. ಪರ್ತಕರ್ತರು ತಾವು ಮಾಡುವ ಕೆಲಸವನ್ನು ನಿಲ್ಲಿಸುವಂತಹ ಸ್ಥಿತಿ ಉಂಟಾಗಿದೆ ಎಂದು ನಾನು ಯೋಚಿಸುವುದಿಲ್ಲ. ಆದರೆ, ವಿಶ್ವದಾದ್ಯಂತ ಎಲ್ಲ ಸರ್ಕಾರಗಳು ತಮ್ಮ ವಿರುದ್ಧದ ಟೀಕೆಗೆ ತುಂಬಾ ಅಸಹಿಷ್ಣುಗಳಾಗಿವೆ’ ಎಂದು ಹೇಳಿದರು.

‘ಪತ್ರಕರ್ತರ ರಕ್ಷಣೆಗಾಗಿ ಮತ್ತು ಅವರ ಮೇಲಿನ ದಾಳಿಯನ್ನು ಖಂಡಿಸುವ ಕೆಲಸವನ್ನು ಆರ್‌ಎಸ್‌ಎಫ್‌ನಂತಹ ಸರ್ಕಾರೇತರ ಸಂಸ್ಥೆ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾನು ಅತಿಹೆಚ್ಚು ಬೆದರಿಕೆಯನ್ನು ಎದುರಿಸಬೇಕಾಯಿತು. ನನ್ನ ಕೆಲಸ ಮಾಡುವುದಕ್ಕೆ ನನಗೆ ಸಾಧ್ಯವಾಗಲಿಲ್ಲ. ಆಗ, ಆರ್‌ಎಸ್‌ಎಫ್ ನನ್ನಲ್ಲಿ ನೈತಿಕ ಸ್ಥೈರ್ಯ ತುಂಬಿತು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.