ಇಸ್ಲಾಮಾಬಾದ್: ಅಫ್ಗಾನಿಸ್ತಾನದ ಎಲ್ಲ ಬ್ಯೂಟಿ ಸಲೂನ್ಗಳು ಕೂಡಲೇ ಬಾಗಿಲು ಮುಚ್ಚಬೇಕು ಎಂದು ತಾಲಿಬಾನ್ ಮಂಗಳವಾರ ಹೇಳಿದೆ.

ಸಲೂನ್ಗಳಲ್ಲಿ ನೀಡಲಾಗುವ ಸೇವೆಗಳಿಗೆ ಇಸ್ಲಾಂನಲ್ಲಿ ನಿಷೇಧವಿದೆ. ಜತೆಗೆ, ಮದುವೆ ಸಮಾರಂಭಗಳಲ್ಲಿ ಸಲೂನ್ಗಳು ವಧುವಿನ ಕುಟುಂಬದವರ ಆರ್ಥಿಕ ಹೊರೆಗೂ ಕಾರಣವಾಗುತ್ತಿವೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ.

ಸಲೂನ್ಗಳನ್ನು ಮುಚ್ಚಲು ಈ ಹಿಂದೆ ಒಂದು ತಿಂಗಳ ಗಡುವು ನೀಡಲಾಗಿತ್ತು. ಈ ನಿರ್ಧಾರದ ವಿರುದ್ಧ ಅಲ್ಲಲ್ಲಿ ಕೆಲ ಪ್ರತಿಭಟನೆಗಳು ನಡೆದಿದ್ದವಾದರೂ, ಅದನ್ನೆಲ್ಲ ಹಿಮ್ಮೆಟ್ಟಿಸಿರುವ ಸರ್ಕಾರ ಸಲೂನ್ಗಳಿಗೆ ಬೀಗ ಹಾಕಿಸಿದೆ.

ಒಂದು ವೇಳೆ ಸಲೂನ್ಗಳನ್ನು ಮುಚ್ಚದೇ ಹೋದರೆ, ಸೇನಾ ಬಲ ಪ್ರಯೋಗಿಸಲಾಗುತ್ತದೆಯೇ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

ಸರ್ಕಾರದ ಈ ನಿರ್ಧಾರದಿಂದಾಗಿ 60,000 ಮಹಿಳೆಯರ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಮಹಿಳಾ ಹಕ್ಕುಗಳ ಸಂಘಟನೆಗಳು ತಿಳಿಸಿವೆ.

ಈ ನಿರ್ಬಂಧವನ್ನು ಮರುಪರಿಶೀಲಿಸುವಂತೆ ಅಫ್ಗನ್ ಆಡಳಿತದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ವಿಶ್ವ ಸಂಸ್ಥೆ ತಿಳಿಸಿದೆ.

ಈ ಹಿಂದೆ ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ತಡೆಯೊಡ್ಡಿದ್ದ ಸರ್ಕಾರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೂ ನಿರ್ಬಂಧ ಹೇರಿತ್ತು. ಈಗ ಬ್ಯೂಟಿ ಸಲೂನ್ಗಳನ್ನು ಮುಚ್ಚಿಸಲಾಗಿದ್ದು, ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.