ಒಡೆಸಾ : ಉಕ್ರೇನಿನ ಕಪ್ಪು ಸಮುದ್ರದ ನಗರ ಒಡೆಸಾ ಮೇಲೆ ಭಾನುವಾರ ಮುಂಜಾನೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಬ್ಬರು ಮೃತಪಟ್ಟು, 22 ಮಂದಿ ಗಾಯಗೊಂಡಿದ್ದಾರೆ. ಬಂದರು ನಗರದ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡವರಲ್ಲಿ ನಾಲ್ವರು ಮಕ್ಕಳಿದ್ದಾರೆ. ಐತಿಹಾಸಿಕ ಟ್ರಾನ್ಸ್‌ಫಿಗರೇಷನ್ ಕ್ಯಾಥೆಡ್ರಲ್ ಸೇರಿದಂತೆ ಹಲವು ಸ್ಮಾರಕಗಳು ಹಾನಿಗೊಳಗಾಗಿವೆ’ ಎಂದು ಪ್ರಾದೇಶಿಕ ಗವರ್ನರ್ ಒಲೇಹ್ ಕಿಪರ್ ತಿಳಿಸಿದ್ದಾರೆ.

‘ಆರು ವಸತಿ ಕಟ್ಟಡಗಳ ಮೇಲೆ ದಾಳಿ ನಡೆದಿದೆ. ಕೆಲವರು ಅಪಾರ್ಟ್‌ಮೆಂಟ್‌ಗಳಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಒಡೆಸಾ ಪ್ರದೇಶದಲ್ಲಿ ರಷ್ಯಾ ವಿರೋಧಿ ಉಗ್ರ ಚಟುವಟಿಕೆಗೆ ಸಿದ್ಧತೆ ನಡೆಸುತ್ತಿದ್ದ ಕಾರಣ ನಮ್ಮ ಪಡೆಗಳು ದಾಳಿ ನಡೆಸಿವೆ’ ಎಂದು ರಷ್ಯಾ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಕ್ಯಾಥೆಡ್ರಲ್ ಮೇಲಿನ ದಾಳಿಯನ್ನು ರಷ್ಯಾ ನಿರಾಕರಿಸಿದೆ. ಉಕ್ರೇನ್ ಕ್ಷಿಪಣಿ ಪತನದಿಂದಲೇ ಅದು ಉರುಳಿ ಬಿದ್ದಿರಬಹುದು ಎಂದು ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.