ವಾಷಿಂಗ್ಟನ್:ಅಮೆರಿಕ ಕಾಂಗ್ರೆಸ್‌ನ ಮೊದಲ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್ ಅವರು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಸಿಎನ್ಎನ್ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ 'ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ. ಮುಂದಿನ ವಾರದಲ್ಲಿ ಅಧಿಕೃತವಾಗಿ ಪ್ರಕಟಿಸುವುದಾಗಿ' ತುಳಸಿ ಹೇಳಿದ್ದಾರೆ.

37 ವರ್ಷದ ತುಳಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊದಲ ಹಿಂದೂ ಮಹಿಳೆಯಾಗಿದ್ದಾರೆ.

ತುಳಸಿ ಅವರುಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ. ಅವರುಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿದ್ದರು. ಸದ್ಯ ಅಮೆರಿಕದ ಪ್ರಬಲ ಸಶಸ್ತ್ರ ಸೇವಾ ಸಮಿತಿ ಮತ್ತು ವಿದೇಶಾಂಗ ವ್ಯವಹಾರ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ.

ನಾನು ಈ ನಿರ್ಧಾರ ತೆಗೆದುಕೊಳ್ಳಲು ಹಲವು ಕಾರಣಗಳಿವೆ, ಅಮೆರಿಕ ಜನರಆರೋಗ್ಯ ಸಮಸ್ಯೆಗಳ ಜತೆಗೆ ಹವಾಮಾನ ಬದಲಾವಣೆ ಮತ್ತುನ್ಯಾಯಾಂಗದಲ್ಲಿಸುಧಾರಣೆಯಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನುಬಗೆಹರಿಸಬೇಕಿದೆ ಎಂದು ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ದೇಣಿಗೆ ಸಂಗ್ರಹಿಸಲು ತುಳಸಿ ಅವರ ಬೆಂಬಲಿಗರು ಸದ್ದಿಲ್ಲದೇ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ದೊಡ್ಡ ಸಂಖ್ಯೆಯಲ್ಲಿರುವ ಭಾರತೀಯ ಅಮೆರಿಕನ್ನರು ಹಾಗೂ ಸಮರ್ಥ ಅಭಿಯಾನ ನಡೆಸಲು ಸ್ವಯಂಸೇವಕರ ಪಡೆಯನ್ನು ರಚನ ಮಾಡಿದ್ದಾರೆ.

ತುಳಸಿ ಅವರು ಡೆಮಾಕ್ರಟಿಕ್ ಪಕ್ಷದ ಹೊಸ ಧ್ವನಿ ಆಗಿದ್ದು, ಅಮೆರಿಕ–ಭಾರತ ಸಂಬಂಧಕ್ಕೆ ಬೆಂಬಲ, ಇರಾಕ್ ಯುದ್ಧಕ್ಕೆ ವಿರೋಧ, ಸೌದಿಗೆ ಶಸ್ತ್ರಾಸ್ತ ಮಾರಾಟಕ್ಕೆ ಆಕ್ಷೇಪ ಎತ್ತುವ ಮೂಲಕ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಾಥಮಿಕ ಚುನಾವಣೆಗಳುಫೆಬ್ರುವರಿ 3ರಿಂದ ಆರಂಭವಾಗಲಿವೆ. ಲೋವಾ, ನ್ಯೂ ಹ್ಯಾಂಪ್‌ಶೈರ್, ನೆವಾಡ ಮತ್ತು ದಕ್ಷಿಣ ಕರೋಲಿನಾ ರಾಜ್ಯಗಳಲ್ಲಿ ಜನರನ್ನು ಸೆಳೆಯಲು ತುಳಸಿ ಅವರ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ.

ಅಮೆರಿಕದಲ್ಲಿ ಯಹೂದಿಗಳನ್ನು ಹೊರತುಪಡಿಸಿದರೆ ಭಾರತೀಯರೇ ಪ್ರಮುಖ ಜನಾಂಗೀಯ ಗುಂಪು ಎನಿಸಿದೆ. ಬಹುತೇಕ ರಾಜ್ಯಗಳ ಚುನಾವಣೆಗಳಲ್ಲಿ ಭಾರತೀಯ ಸಮುದಾಯವೇ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಡೆಮಾಕ್ರಟಿಕ್ ಪಕ್ಷದ ತುಳಸಿ ಗಬ್ಬಾರ್ಡ್ ರಾಜಕೀಯದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.