ಲಂಡನ್:ಈಗ ಸ್ಥಗಿತಗೊಂಡಿರುವ ಕಿಂಗ್ಫಿಷರ್ ಏರ್ಲೈನ್ಸ್ ಬ್ಯಾಂಕುಗಳಿಂದ ಪಡೆದ ಸುಮಾರು ₹9 ಸಾವಿರ ಕೋಟಿ ಬಾಕಿ ಉಳಿಸಿಕೊಂಡು ಬ್ರಿಟನ್ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ಗೃಹ ಕಾರ್ಯದರ್ಶಿ ಸಾಜಿದ್ ಸಾವಿದ್ ಆದೇಶಿಸಿದ್ದಾರೆ.

ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಬ್ರಿಟನ್ ನ್ಯಾಯಾಲಯದಲ್ಲಿ ನಡೆದ ಕಾನೂನು ಹೋರಾಟದಲ್ಲಿ ಮಲ್ಯ ಅವರಿಗೆ ಕಳೆದ ಡಿಸೆಂಬರ್ನಲ್ಲಿ ಸೋಲಾಗಿತ್ತು.

ಹಸ್ತಾಂತರ ಆದೇಶ ಹೊರಡಿಸುವ ಅಧಿಕಾರ ಇರುವುದು ಗೃಹ ಕಾರ್ಯದರ್ಶಿಗೆ ಮಾತ್ರ ಹಾಗಾಗಿ ಮುಖ್ಯ ಮ್ಯಾಜಿಸ್ಟ್ರೇಟ್ ತೀರ್ಪನ್ನು ಗೃಹ ಕಾರ್ಯದರ್ಶಿಗೆ ಕಳುಹಿಸಲಾಗಿತ್ತು.ಮಲ್ಯ ವಿರುದ್ಧ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳಿವೆ ಎಂದು ಭಾರತ ಸರ್ಕಾರ ವಾದಿಸಿತ್ತು. ಹಾಗಾಗಿ, 2017ರ ಏಪ್ರಿಲ್ನಲ್ಲಿ ಸ್ಕಾಟ್ಲೆಂಡ್ ಯಾರ್ಡ್, ಮಲ್ಯ ವಿರುದ್ಧ ಹಸ್ತಾಂತರ ವಾರಂಟ್ ಹೊರಡಿಸಿತ್ತು. ಅದಕ್ಕೆ ಜಾಮೀನು ಪಡೆದುಕೊಂಡಿದ್ದರು. ಭಾರತದ ಜೈಲುಗಳು ಸರಿ ಇಲ್ಲ ಎಂದು ಮಲ್ಯ ಅವರು ಹಸ್ತಾಂತರವನ್ನು ವಿರೋಧಿಸಲು ಕಾರಣಕೊಟ್ಟಿದ್ದರು.

ಆದರೆ, ಮುಂಬೈನ ಜೈಲಿನ ದೃಶ್ಯಗಳನ್ನು ಚಿತ್ರೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು ಮತ್ತು ಮಲ್ಯ ಅವರ ಇತರ ಆಕ್ಷೇಪಗಳಿಗೂ ಸರ್ಕಾರ ಉತ್ತರ ನೀಡಿತ್ತು. ಈ ಎಲ್ಲವೂ ತೃಪ್ತಿಕರವಾಗಿವೆ ಎಂದು ನ್ಯಾಯಾಲಯ ಹೇಳಿತ್ತು.

ಇದನ್ನೂ ಓದಿ:ಮಲ್ಯ ಗಡಿಪಾರು ಮಾಡಿ: ಬ್ರಿಟನ್ನ ವೆಸ್ಟ್ಮಿನ್ಸ್ಟರ್ ನ್ಯಾಯಾಲಯ ಆದೇಶ

ಆದಾಗ್ಯೂ, ಈ ಕ್ರಮದ ವಿರುದ್ಧ14 ದಿನಗಳ ಒಳಗಾಗಿನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಅವಕಾಶವಿದೆ ಎನ್ನಲಾಗಿದೆ.

ಇವನ್ನೂ ಓದಿ...

*ವಿಜಯ್ ಮಲ್ಯ ‘ದೇಶಭ್ರಷ್ಟ ಆರ್ಥಿಕ ಅಪರಾಧಿ’: ಆಸ್ತಿ ಮುಟ್ಟುಗೋಲು ಇನ್ನು ಸುಲಭ

*ಗಡಿಪಾರಿನಿಂದ ತಪ್ಪಿಸಿಕೊಳ್ಳಲು ವಕೀಲರನ್ನೇ ನಂಬಿರುವ ಮಲ್ಯ

*ಮಲ್ಯ ಗಡಿಪಾರು: ವಸೂಲಿ ತ್ವರಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.