ಕೀವ್: ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದೊಂದಿಗಿನ ಎಲ್ಲ ರೀತಿಯ ಸಂಪರ್ಕವನ್ನು ಉಕ್ರೇನ್ ಕಳೆದುಕೊಂಡಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಗುರುವಾರ ತಿಳಿಸಿದೆ.

ಸ್ಥಾವರವನ್ನು ರಷ್ಯಾ ವಶಪಡಿಸಿಕೊಂಡು, ಹೊರಗಿನ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ ಮರುದಿನ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಐಎಇಎಗೆ ಸಂಪರ್ಕ ಕಡಿತದ ಕುರಿತು ಉಕ್ರೇನ್ ಮಾಹಿತಿ ನೀಡಿದೆ.

ವಿಷಯದ ಬಗ್ಗೆ ಮಾತನಾಡಿರುವ ಐಎಇಎನ ಮಹಾನಿರ್ದೇಶಕ ರಫೇಲ್ ಮರಿಯಾನೊ ಗ್ರೋಸಿ, ‘ರಷ್ಯಾದ ವಶದಲ್ಲಿರುವ ಪರಮಾಣು ಕೇಂದ್ರಕ್ಕೆ ಈಗ ವಿದ್ಯುತ್ ವ್ಯವಸ್ಥೆ ಮರುಸ್ಥಾಪಿಸಲಾಗಿದೆ ಎಂಬ ವರದಿಗಳು ನಮಗೆ ಸಿಕ್ಕಿವೆ. ಆದರೆ ಅದನ್ನು ದೃಢಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಸ್ಥಾವರದ ನಿರ್ವಹಣೆ ಮತ್ತು 1986ರ ಅಣುದುರಂತದಲ್ಲಿ ಸೃಷ್ಟಿಯಾದ ತ್ಯಾಜ್ಯದ ನಿರ್ವಹಣೆ ಸೇರಿದಂತೆ ಹಲವು ಕಾರಣಗಳಿಗಾಗಿ ವಿದ್ಯುತ್ ಪೂರೈಕೆ ಅತ್ಯಗತ್ಯ. ವಿದ್ಯುತ್ ಪೂರೈಕೆ ನಿಂತರೆ, ಇವುಗಳ ನಿರ್ವಹಣೆಯಲ್ಲಿ ಅಡಚಣೆಯುಂಟಾಗಿ ಮತ್ತೊಂದು ಸಮಸ್ಯೆ ಉದ್ಭವಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.