ವಿಶ್ವಸಂಸ್ಥೆ: ಸಿರಿಯಾ ಮತ್ತು ಮ್ಯಾನ್ಮಾರ್ನಲ್ಲಿ ನಡೆದ ಯುದ್ಧ ಅಪರಾಧಗಳ ತನಿಖೆಗೆ ಹಣವನ್ನು ತನ್ನ ಬಜೆಟ್ನಲ್ಲಿ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ಮೀಸಲಿರಿಸಿದೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯು 2020ನೇ ಸಾಲಿನ ಬಜೆಟ್ಗೆ ಶುಕ್ರವಾರ ಒಪ್ಪಿಗೆ ನೀಡಿದೆ. ಬಜೆಟ್ ಮೊತ್ತ ಅಂದಾಜು ₹21,428.25 ಕೋಟಿ ಇದೆ. 2019ಕ್ಕೆ ಹೋಲಿಸಿದರೆ ಬಜೆಟ್ ಗಾತ್ರ ಕೊಂಚ ಹಿಗ್ಗಿದೆ. 2019ರಲ್ಲಿ ಬಜೆಟ್ ಗಾತ್ರ ₹20,713 ಕೋಟಿ ಇತ್ತು. ವಿಶ್ವಸಂಸ್ಥೆ ಕೈಗೆತ್ತಿಕೊಂಡಿರುವ ಮಿಷನ್ಗಳ ಏರಿಕೆ, ಹಣದುಬ್ಬರದಿಂದ ಬಜೆಟ್ ಗಾತ್ರ ಹಿಗ್ಗಿದೆ ಎನ್ನಲಾಗಿದೆ.

ಸಿರಿಯಾದಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಆದಂತಹ ಅಪರಾಧಗಳು ಹಾಗೂ ಮ್ಯಾನ್ಮಾರ್ನಲ್ಲಿ ರೊಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಕುರಿತು ತನಿಖೆಗೆ ವಿಶ್ವಸಂಸ್ಥೆ ನೇರವಾಗಿ ಹಣಕಾಸು ನೆರವು ನೀಡಲಿದೆ. ಇಲ್ಲಿಯವರೆಗೂ ಕೆಲ ದೇಶಗಳಷ್ಟೇ ಈ ತನಿಖೆಗೆ ಹಣಕಾಸು ನೆರವು ನೀಡುತ್ತಿದ್ದವು. ಇದೀಗ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಕಡ್ಡಾಯವಾಗಿ ಈ ತನಿಖೆಗೆ ನೆರವು ನೀಡಬೇಕಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.