ವಿಶ್ವಸಂಸ್ಥೆ: ‘ನೈಸರ್ಗಿಕ ವಿಕೋಪಗಳು ಪ್ರಪಂಚದಾದ್ಯಂತ ಅಪಾಯ ಸೃಷ್ಟಿಸುತ್ತಿವೆ. ಇದಕ್ಕೆ ಕೇರಳದ ಇತ್ತೀಚಿನ ವಿನಾಶಕಾರಿ ಪ್ರವಾಹವೇ ಸಾಕ್ಷಿ’ ಎಂದು ವಿಶ್ವಸಂಸ್ಥೆಸಾಮಾನ್ಯ ಸಭೆಯ ಅಧ್ಯಕ್ಷೆ ಮರಿಯಾ ಫೆರ್ನಂಡಾ ಎಸ್ಪಿನೊಸಾ ಹೇಳಿದರು.

ವಿಶ್ವಸಂಸ್ಥೆಯ73ನೇ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಆಗಸ್ಟ್ನಲ್ಲಿ ಕೇರಳದಲ್ಲಿ ಸಂಭವಿಸಿದ ಅಪಾಯಕಾರಿ ಪ್ರವಾಹ ಉಂಟಾಯಿತು. ಈ ದುರಂತದಲ್ಲಿ 400 ಮಂದಿ ಮೃತಪಟ್ಟರೆ, ಹಲವರು ಮನೆ ಕಳೆದುಕೊಂಡರು. ಇದು ಇತಿಹಾಸ ಕಂಡರಿಯದ ಹವಾಮಾನ ವೈಪರೀತ್ಯದ ಗಂಡಾಂತರ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜಗತ್ತಿನಾದ್ಯಂತ ಹಿಂಸಾಚಾರ, ಯುದ್ಧ ಮತ್ತು ಹವಾಮಾನ ಬದಲಾವಣೆಯಿಂದ ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ನಾಶಕ್ಕೆ ಕಾರಣವಾಗುತ್ತಿರುವ ನಮ್ಮ ಹವ್ಯಾಸಗಳು ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಹವಾಮಾನ ವೈಪರಿತ್ಯವನ್ನು ತಡೆಯುವ ಒಪ್ಪಂದದ ಪ್ರಗತಿ ಸಾಧಿಸಲು ವಿಶ್ಚದಾದ್ಯಂತ ನಾಯಕರು ಒಗ್ಗೂಡಬೇಕು’ ಎಂದು ತಿಳಿಸಿದರು.‘ಲಿಂಗ ಸಮಾನತೆ, ಮಹಿಳಾ ಸ್ವಾವಲಂಬನೆ, ವಲಸಿಗರು ಮತ್ತು ನಿರಾಶ್ರಿತರಿಗೆ ಹೊಸ ಜಾಗತಿಕ ಭದ್ರತೆ, ಉದ್ಯೋಗದ ಅವಕಾಶ ಮತ್ತು ಪರಿಸರ ರಕ್ಷಣೆಗೆ ಹೆಚ್ಚಿನ ಗಮನ ನೀಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.