ವಾಷಿಂಗ್ಟನ್: ಯುಎಸ್ ಕ್ಯಾಪಿಟಲ್ ಬಳಿ ನಡೆದ ದಾಂದಲೆ, ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಇದೇ ತಿಂಗಳು ರಾಜೀನಾಮೆ ನೀಡುವುದಾಗಿ ಅಲ್ಲಿನ ಪೊಲೀಸ್ ಮುಖ್ಯಸ್ಥ ಸ್ಟೀವನ್ ಸುಂಡ್ ತಿಳಿಸಿದ್ದಾರೆ.

ಟ್ರಂಪ್ ಬೆಂಬಲಿಗರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಪೊಲೀಸ್ ವರಿಷ್ಠರ ವಿರುದ್ಧ ತೀವ್ರ ಟೀಕೆ ಕೇಳಿಬಂದಿತ್ತು.

ಇದನ್ನೂ ಓದಿ:ಅಮೆರಿಕ ಕ್ಯಾಪಿಟಲ್ ಹಿಂಸಾಚಾರ: ಕ್ಯಾಬಿನೆಟ್ ಸದಸ್ಯರಿಬ್ಬರಿಂದ ರಾಜೀನಾಮೆ

ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್ ಡೆಮಾಕ್ರಾಟಿಕ್ ನಾಯಕ ಸೆನೆಟರ್ ಚುಕ್ ಸ್ಕುಮೆರ್ ಅವರು ಗುರುವಾರ ಪೊಲೀಸ್ ವರಿಷ್ಠರ ರಾಜೀನಾಮೆಗೆ ಒತ್ತಾಯಿಸಿದ ಹಿಂದೆಯೇ, ಸ್ವೀವನ್ ಅವರ ಈ ತೀರ್ಮಾನ ಹೊರಬಿದ್ದಿದೆ.

ಯುಎಸ್ ಕ್ಯಾಪಿಟಲ್ ಪೊಲೀಸ್ ಮಂಡಳಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರೆತಿದ್ದು, ನನಗೆ ದೊರೆತ ಗೌರವ ಎಂದು ಈ ಕುರಿತು ಮಂಡಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಮಂಡಳಿಯ ಇತರೆ ಸದಸ್ಯರು ರಾಜೀನಾಮೆ ನೀಡುತ್ತಿದ್ದಾರೆ.

ಇದನ್ನೂ ಓದಿ:ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್; ಜ.20ರಂದು ಅಧಿಕಾರ ಹಸ್ತಾಂತರ

‘ಈಗಾಗಲೇ ಚರ್ಚಿಸಿದಂತೆ ನಾನು 2021 ಜನವರಿ 17ರಿಂದ ಅನಾರೋಗ್ಯ ಸಂಬಂಧ ರಜೆ ಮೇಲೆ ತೆರಳುತ್ತಿದ್ದೇನೆ. ಬಾಕಿ 440 ಗಂಟೆಗಳ ರಜೆ ಲಭ್ಯವಿದ್ದು, ತೆಗೆದುಕೊಳ್ಳಲಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.