ವಾಷಿಂಗ್ಟನ್: ಎಚ್–1ಬಿ ವೀಸಾ ನೀಡುವ ಪ್ರಕ್ರಿಯೆ ಆರಂಭಿಸಿರುವ ಅಮೆರಿಕ, ಎರಡನೇ ಹಂತದ ಲಾಟರಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಪೌರತ್ವ ಮತ್ತು ವಲಸಿಗರ ಸೇವೆ ವಿಭಾಗವು (ಯುಎಸ್‌ಸಿಐಎಸ್) ಮಂಗಳವಾರ ತಿಳಿಸಿದೆ.

ವೀಸಾ ಪಡೆಯಲು ಈಗಾಗಲೇ ಸೂಕ್ತವಾದ ರೀತಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಕೆಲವನ್ನು ರ‍್ಯಾಂಡಮ್ ಆಗಿ ಆರಿಸಿ ವೀಸಾ ನೀಡಲಾಗಿದೆ. ಅಕ್ಟೋಬರ್ 1ರಿಂದ ಆರಂಭವಾಗುವ ಹಣಕಾಸು ವರ್ಷದಿಂದಲೇ ವೀಸಾ ಅವಧಿ ಜಾರಿಯಲ್ಲಿರಲಿದೆ ಎಂದು ಯುಎಸ್‌ಸಿಐಎಸ್ ಹೇಳಿದೆ.

ಎಚ್–1ಬಿ ವೀಸಾದ ಮೊದಲ ಹಂತದ ಲಾಟರಿ ಪ್ರಕ್ರಿಯೆಯು ಏಪ್ರಿಲ್ ಮೊದಲ ವಾರ ನಡೆದಿತ್ತು.

ಅಮೆರಿಕದ ತಂತ್ರಜ್ಞಾನ ಸೇವಾ ಸಂಸ್ಥೆಗಳು ಭಾರತ, ಚೀನಾದಂಥ ದೇಶಗಳ ಉದ್ಯೋಗಿಗಳ ಮೇಲೆ ಬಹುವಾಗಿ ಅವಲಂಬಿತವಾಗಿವೆ. ಈ ಕಂಪನಿಗಳು ವಿದೇಶಗಳ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಎಚ್– 1ಬಿ ವೀಸಾ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.