ವಾಷಿಂಗ್ಟನ್:‘ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿರುವ ಮೊದಲ ಹಿಂದೂ–ಅಮೆರಿಕನ್ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ’ ಎಂದು ಅಧ್ಯಕ್ಷ ಸ್ಥಾನ ಆಕಾಂಕ್ಷಿ, ಸಂಸತ್ ಸದಸ್ಯೆ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.

ಅಮೆರಿಕ ಕಾಂಗ್ರೆಸ್ಗೆ ಆಯ್ಕೆಯಾದ ಮೊದಲ ಹಿಂದೂ ಸದಸ್ಯೆಯಾಗಿರುವ ತುಳಸಿಯವರ ಈ ಹೇಳಿಕೆಗೆ ಕೆಲವು ಮಾಧ್ಯಮಗಳು ಆಕ್ಷೇಪ ವ್ಯಕ್ತಪಡಿಸಿವೆ. ತುಳಸಿ ಅವರ ಬೆಂಬಲಿಗರನ್ನು ಟೀಕಿಸಿರುವ ಮಾಧ್ಯಮಗಳು, ಹಿಂದೂ ಹೆಸರಿರುವ ಅವರ ಬೆಂಬಲಿಗರನ್ನು ‘ಹಿಂದೂ ರಾಷ್ಟ್ರೀಯವಾದಿಗಳು’ ಎಂದು ಟೀಕಿಸಿವೆ.

ತಮ್ಮನ್ನು ‘ಹಿಂದೂ ರಾಷ್ಟ್ರೀಯವಾದಿ’ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿರುವ ತುಳಸಿ, ‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರು ಜನರಿಂದ ಚುನಾಯಿತರಾದ ನಾಯಕ. ಅವರೊಂದಿಗೆ ಅಮೆರಿಕ ಸಂಸತ್ ಸದಸ್ಯರಾದ ಬರಾಕ್ ಒಬಾಮ, ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ಕೂಡ ಸಭೆ ನಡೆಸಿದ್ದರು ಎಂಬುದು ಗೊತ್ತಿರಲಿ’ ಎಂದು ಹೇಳಿದ್ದಾರೆ.

‘ಉಭಯ ದೇಶಗಳ ನಡುವೆ ಸಹಭಾಗಿತ್ವ ಎನ್ನುವುದು ದಶಕಗಳ ಕಾಲದಿಂದಲೂ ಆದ್ಯತೆಯ ವಿಷಯವಾಗಿದೆ. ನಾನು ನನ್ನ ದೇಶದ ಬಗ್ಗೆ ಹೊಂದಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ಹಿಂದೂಯೇತರ ನಾಯಕರನ್ನು ಏಕೆ ಪ್ರಶ್ನಿಸುತ್ತಿಲ್ಲ. ಇದು ವಿರೋಧಿಗಳ ದ್ವಿಮುಖ ನೀತಿಯನ್ನು ತೋರಿಸುತ್ತದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಜಾತಂತ್ರಕ್ಕೆ ಅಪಾಯ’
‘ಅಮೆರಿಕದಲ್ಲಿ ಸದ್ಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಈ ಹಿಂದೆ ಎಂದೆಂದೂ ಇಂತಹ ಸ್ಥಿತಿ ಸೃಷ್ಟಿಯಾಗಿರಲಿಲ್ಲ’ ಎಂದು ಭಾರತೀಯ ಸಂಜಾತೆ, ಅಮೆರಿಕ ಸೆನೆಟರ್ ಕಮಲಾ ಹ್ಯಾರಿಸ್ ಆರೋಪಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವುದಾಗಿ ಹೇಳಿರುವ ಕಮಲಾ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.