ನ್ಯೂಯಾರ್ಕ್: ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 75ನೇ ಸಾಮಾನ್ಯ ಅಧಿವೇಶನವು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ‘ವರ್ಚುವಲ್‘ ಸಭೆಯಾಗಲಿದೆ.

ವಿಶ್ವಸಂಸ್ಥೆಯ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವರ್ಚುವಲ್ ಮಹಾ ಅಧಿವೇಶನ ನಡೆಯುತ್ತಿದೆ. ಎಪ್ಪತ್ತೈದನೇ ಅಧಿವೇಶನ ಎನ್ನುವ ಕಾರಣಕ್ಕೆ ಈ ಸಾಮಾನ್ಯ ಸಭೆ ಮತ್ತಷ್ಟು ಮಹತ್ವದ್ದಾಗಿದೆ.

ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ ಮಹತ್ವದ ವರ್ಚುವಲ್ ಸಾಮಾನ್ಯ ಅಧಿವೇಶನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುದ್ದಾಗಿ ಭಾಗವಹಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಿರುವ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಕೆಲ್ಲಿ ಕ್ರಾಫ್ಟ್, ‘ಈ ವರ್ಚುವಲ್ ಸಭೆಯಲ್ಲಿ ಖುದ್ದಾಗಿ ಭಾಷಣ ಮಾಡುವ ವಿಶ್ವದ ಏಕೈಕ ನಾಯಕರೂ ಆಗಲಿದ್ದಾರೆ‘ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನವನ್ನು ವರ್ಚುವಲ್ ಆಗಿ ನಡೆಸಲು ಜುಲೈ ತಿಂಗಳಲ್ಲೇ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆಗ ತೆಗೆದುಕೊಂಡ ನಿರ್ಧಾರಂತೆ, ಸಭೆಯಲ್ಲಿ ಪಾಲ್ಗೊಳ್ಳುವ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ನಾಯಕರು, ಅಧಿಕಾರಿಗಳು ಕಳೆದ ವಾರವೇ ತಮ್ಮ ವಿಡಿಯೊ ಧ್ವನಿಮುದ್ರಿತ ಭಾಷಣದ ತುಣುಕುಗಳನ್ನು ವಿಶ್ವಸಂಸ್ಥೆಗೆ ಕಳುಹಿಸಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ನಡೆಯುವ ಈ ಮಹಾ ಸಭೆಯಲ್ಲಿ ವಿಶ್ವಸಂಸ್ಥೆಯ 193 ಸದಸ್ಯರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಮಂತ್ರಿ, ವಿದೇಶಾಂಗ ಮಂತ್ರಿಗಳು ಪಾಲ್ಗೊಂಡು ಔಪಚಾರಿಕವಾಗಿ ಭಾಷಣ ಮಾಡುತ್ತಾರೆ.ಆದರೆ, ಈ ಬಾರಿ ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಅವೆಲ್ಲಕ್ಕೂ ಕಡಿವಾಣ ಹಾಕಲಾಗಿದೆ. ಈಗ ನಡೆಯುವ ಅಧಿವೇಶನಕ್ಕೆ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ನೋಡಿಕೊಳ್ಳಬೇಕೆಂದು ಮಹಾಸಭೆ ಖುದ್ದು ಹಾಜರಾಗುವ ‘ನಾಯಕ‘ರಿಗೂವಿಶ್ವಸಂಸ್ಥೆ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.