ಸ್ಟಾಕ್‌ಹೋಮ್:ಅಮೆರಿಕದ ಸಂಶೋಧಕರಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೂಟಿಯನ್ ಅವರಿಗೆ ಜಂಟಿಯಾಗಿ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿ ಸೋಮವಾರ ಹೇಳಿದೆ.

ಚರ್ಮದಲ್ಲಿನ ಸ್ಪರ್ಶ ಮತ್ತು ತಾಪಮಾನ ಗ್ರಾಹಕ ವ್ಯವಸ್ಥೆಯ ಕುರಿತ ಸಂಶೋಧನೆಗಳಿಗಾಗಿ ಇಬ್ಬರಿಗೂ ಬಹುಮಾನವನ್ನು ನೀಡಲಾಗಿದೆ ಎಂದು ಸಮಿತಿ ಹೇಳಿದೆ.

ನರ ಪ್ರಚೋದನೆಗಳ ಮೂಲಕ ಮಾನವರು ತಾಪಮಾನ ಮತ್ತು ಒತ್ತಡವನ್ನು ಹೇಗೆ ಗ್ರಹಿಸುತ್ತಾರೆ ಎಂಬ ಯಾಂತ್ರಿಕತೆಯನ್ನು ಈ ಜೋಡಿ ನಿರೂಪಿಸಿದೆ.

ದೀರ್ಘಕಾಲೀನ ನೋವುಗಳನ್ನೂ ಒಳಗೊಂಡಂತೆ ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಈ ಜ್ಞಾನವನ್ನು ಬಳಸಲಾಗುತ್ತಿದೆ.

ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (₹8.50 ಕೋಟಿ) ಒಳಗೊಂಡಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.