ವಾಷಿಂಗ್ಟನ್: ಭಾರತ ಮೂಲದ ಉದ್ಯೋಗಿಗಳಿಗೆ ಎಚ್–1ಬಿ ವೀಸಾ ನೀಡಲು ಕಠಿಣ ನಿಯಮಗಳನ್ನು ವಿಧಿಸುವ ಬಗ್ಗೆ ಮರುಪರಿಶೀಲನೆ ಅಗತ್ಯ. ಆ ಮೂಲಕ ಭಾರತದಿಂದ ಪ್ರತಿಭಾವಂತರು ಇಲ್ಲಿಗೆ ಬರಲು ಅನುಕೂಲವಾಗಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಭಿಪ್ರಾಯಪಟ್ಟರು.

ಇಲ್ಲಿ ನಡೆದ ಸಚಿವರ ಮಟ್ಟದ ಮಾತುಕತೆ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಉದ್ಯೋಗ ಅರಸಿ ಬಂದಿರುವ ಭಾರತದ ಪ್ರತಿಭಾಂತರು ಅಮೆರಿಕದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಉದ್ಯೋಗಿಗಳು ಉಭಯ ದೇಶಗಳ ನಡುವಿನ ಬಾಂಧವ್ಯದ ಸೇತುವೆಯೂ ಆಗಿದ್ದಾರೆ’ ಎಂದರು.

ಭಾರತೀಯರಿಗೆ ಎಚ್–1ಬಿ ವೀಸಾ ನೀಡುವುದಕ್ಕೆ ಕೆಲವು ನಿರ್ಬಂಧ ವಿಧಿಸುವುದಾಗಿ ಅಮೆರಿಕ ಘೋಷಿಸಿತ್ತು. ಇದರಿಂದ ಐ.ಟಿ ಕ್ಷೇತ್ರದಲ್ಲಿರುವವರಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಈ ಬಗ್ಗೆ ಟ್ರಂಪ್ ಆಡಳಿತ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ನಿರಾಕರಣೆ: ಭಾರತ ಸಂಜಾತ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ ಅವರನ್ನು ಭೇಟಿಯಾಗಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ನಿರಾಕರಿಸುವ ಮೂಲಕ ಕಾಶ್ಮೀರ ಕುರಿತ ನಿಲುವಿನಲ್ಲಿ ಭಾರತ ರಾಜಿಯಾಗುವುದಿಲ್ಲ ಎಂಬ ಸಂದೇಶ ರವಾನಿಸಿದರು.

ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಹೇರಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸುವಂತೆ ಪ್ರಮೀಳಾ ಅವರು ಅಮೆರಿಕದ ಸಂಸತ್ನಲ್ಲಿ ಪ್ರಸ್ತಾವನೆ ಮಂಡಿಸಿದ್ದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೈಶಂಕರ್, ಸಂಸದೆಯನ್ನು ಭೇಟಿ ಮಾಡದಿರುವ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

‘ಅಮೆರಿಕ ಸಂಸತ್ನಲ್ಲಿ ಮಂಡಿಸಿದ ಪ್ರಸ್ತಾವನೆ ಬಗ್ಗೆ ಅರಿವಿದೆ. ಆದರೆ, ಜಮ್ಮು–ಕಾಶ್ಮೀರದ ವಸ್ತುಸ್ಥಿತಿ ಬಗ್ಗೆಯಾಗಲಿ ಅಥವಾ ಕಣಿವೆ ರಾಜ್ಯ ಕುರಿತಂತೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಹೀಗಾಗಿ ಪ್ರಮೀಳಾ ಅವರನ್ನು ಭೇಟಿಯಾಗಲು ನನಗೆ ಆಸಕ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾನೂನು ಬಲಪಡಿಸಲು ಅಮೆರಿಕದ ಫೆಡರಲ್ ಜುಡಿಷಿಯಲ್ ಸೆಂಟರ್ ಮತ್ತು ಭೋಪಾಲ್ನಲ್ಲಿರುವ ನ್ಯಾಷನಲ್ ಜುಡಿಷಿಯಲ್ ಅಕಾಡೆಮಿ ಕೈಜೋಡಿಸಲಿವೆ.

- ಎಸ್.ಜೈಶಂಕರ್, ವಿದೇಶಾಂಗ ಸಚಿವ

ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ ಭೇಟಿಗೆ ನಿರಾಕರಣೆ

ಭಾರತ ಸಂಜಾತ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ ಅವರನ್ನು ಭೇಟಿಯಾಗಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ನಿರಾಕರಿಸುವ ಮೂಲಕ ಕಾಶ್ಮೀರ ಕುರಿತ ನಿಲುವಿನಲ್ಲಿ ಭಾರತ ರಾಜಿಯಾಗುವುದಿಲ್ಲ ಎಂಬ ಸಂದೇಶ ರವಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.