ವಾಷಿಂಗ್ಟನ್: ಎಚ್–1ಬಿ ವೀಸಾ ನೀಡಲು ಎರಡನೇ ಬಾರಿ ಲಾಟರಿ ಮೂಲಕ ಆಯ್ಕೆ ಮಾಡಲು ಅಮೆರಿಕ ನಿರ್ಧರಿಸಿದೆ.

ಇದರಿಂದ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರಿಗೆ ಅನುಕೂಲವಾಗಲಿದೆ. ಮೊದಲನೇ ಬಾರಿ ಆಯ್ಕೆಯಾಗದವರಿಗೆ ಈ ಬಾರಿ ವೀಸಾ ಲಭ್ಯವಾಗುವ ಸಾಧ್ಯತೆಗಳಿವೆ.

ಈ ವರ್ಷದ ಆರಂಭದಲ್ಲಿ ಮೂಲಕ ವೀಸಾಗೆ ಆಯ್ಕೆ ಮಾಡಲಾಗಿತ್ತು. ಆದರೆ, ಸಂಸತ್ ನಿಗದಿಪಡಿಸಿದ ಸಂಖ್ಯೆಯಷ್ಟು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ, ಈ ಬಾರಿ ಲಾಟರಿ ಮೂಲಕ ಆಯ್ಕೆ ಮಾಡುವ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್) ತಿಳಿಸಿದೆ.

ಎಚ್–1ಬಿ ವೀಸಾಗೆ ಅಪಾರ ಬೇಡಿಕೆ ಇದೆ. ಮಾಹಿತಿ ತಂತ್ರಜ್ಞಾನ ಕಂಪನಿಗಳು ಭಾರತ, ಚೀನಾ ಸೇರಿದಂತೆ ವಿವಿಧ ದೇಶದ ವೃತ್ತಿಪರರನ್ನು ನೇಮಿಸಿಕೊಳ್ಳುತ್ತವೆ.

ಎರಡನೇ ಬಾರಿ ಲಾಟರಿ ಮೂಲಕ ಆಯ್ಕೆ ಮಾಡುವ ಯುಎಸ್‌ಸಿಐಎಸ್ ನಿರ್ಧಾರದಿಂದ ಹಲವು ಅರ್ಜಿದಾರರಿಗೆ ಆಶಾಭಾವ ಮೂಡಿದೆ.

ಪ್ರತಿ ವರ್ಷ 65 ಸಾವಿರ ಎಚ್–1ಬಿ ವೀಸಾ ನೀಡಲು ಸಂಸತ್ ಅನುಮೋದನೆ ನೀಡಿದೆ.

ಇದನ್ನೂ ಓದಿ... ಶೌಚಗುಂಡಿ ಸ್ವಚ್ಛ ಮಾಡುವಾಗ ಒಂದೂ ಸಾವು ಸಂಭವಿಸಿಲ್ಲ: ಸಚಿವರ ಹೇಳಿಕೆಗೆ ಆಕ್ರೋಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.