ವಾಷಿಂಗ್ಟನ್: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ಎಚ್–1ಬಿ ವೀಸಾ ಉದ್ಯೋಗಿಗಳನ್ನೊಳಗೊಂಡಂತೆ 2022ರಲ್ಲಿ ವೀಸಾ ಕೋರಿರುವ ಅರ್ಜಿದಾರರಿಗೆ ಮೌಖಿಕ ಸಂದರ್ಶನವನ್ನು ಕೈಬಿಡುವುದಾಗಿ ಅಮೆರಿಕ ಘೋಷಿಸಿದೆ.

ಎಚ್–1ಬಿ ವಲಸೆರಹಿತ ವೀಸಾ ಆಗಿದ್ದು, ಇದು ಅಮೆರಿಕದ ಕಂಪನಿಗಳಿಗೆ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಎಚ್–1ಬಿ ವೀಸಾವನ್ನು ಅವಲಂಬಿಸಿವೆ.

‘ವಲಸೆರಹಿತ ಕೆಲಸದ ವೀಸಾಗಳಿಗೆ ಮತ್ತು ಕೆಲ ವರ್ಗಗಳಲ್ಲಿ ಮೌಖಿಕ ಸಂದರ್ಶನಗಳನ್ನು ಕೈಬಿಡಲು ದೂತಾವಾಸ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ಅಧಿಕಾರ ನೀಡಲಾಗಿದೆ’ ಎಂದು ಗುರುವಾರ ಪ್ರಕಟಿಸಲಾಗಿದೆ.

‘ವಿಶೇಷ ಉದ್ಯೋಗದಲ್ಲಿರುವ ವ್ಯಕ್ತಿಗಳು (ಎಚ್–1ಬಿ ವೀಸಾ) ತರಬೇತಿದಾರರು ಅಥವಾ ವಿಶೇಷ ಶಿಕ್ಷಣ ಸಂದರ್ಶಕರು (ಎಚ್–3 ವೀಸಾ), ಇಂಟ್ರಾಕಂಪನಿ ವರ್ಗಾವಣೆದಾರರು (ಎಲ್ ವೀಸಾ), ಅಸಾಧಾರಣ ಸಾಮರ್ಥ್ಯ ಅಥವಾ ಸಾಧನೆ ಮಾಡಿರುವ ವ್ಯಕ್ತಿಗಳು (ಒ ವೀಸಾ), ಕ್ರೀಡಾಪಟುಗಳು, ಕಲಾವಿದರು ಮತ್ತು ಮನರಂಜನೆ (ಪಿ ವೀಸಾ), ಮತ್ತು ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ (ಕ್ಯೂ ವೀಸಾ) ಮೌಖಿಕ ಸಂದರ್ಶನವನ್ನು ಕೈಬಿಡಲಾಗಿದೆ’ ಎಂದು ಅಮೆರಿಕವು ತಿಳಿಸಿದೆ.

ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ವೆಬ್‌ಸೈಟ್‌ಗಳನ್ನು ಪರಿಶೀಲಿಸಬೇಕು ಎಂದು ದೂತಾವಾಸ ಕಚೇರಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.