ವಾಷಿಂಗ್ಟನ್: ಟಿಬೆಟ್, ಹಾಂಗ್ಕಾಂಗ್ಗಳಲ್ಲಿ ಹಾಗೂ ತನ್ನದೇ ಪ್ರಾಂತ್ಯವಾದ ಷಿನ್ಜಿಯಾಂಗ್ನಲ್ಲಿ ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಮೆರಿಕ ಹೇಳಿದೆ.

ಚೀನಾದ ವಿದೇಶಾಂಗ ಕಾರ್ಯದರ್ಶಿ ಯಾಂಗ್ ಜಿಯೆಚಿ ಅವರೊಂದಿಗೆ ನಡೆಸಿದ ಮಾತುಕತೆ ವೇಳೆಅಮೆರಿಕದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಮಾನವ ಹಕ್ಕುಗಳು ರಕ್ಷಣೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಜಾರಿಯಲ್ಲಿರುವ ಅಂತರರಾಷ್ಟ್ರೀಯ ವ್ಯವಸ್ಥೆಗೆ ಅನುಗುಣವಾಗಿ ಚೀನಾ ನಡೆದುಕೊಳ್ಳುತ್ತಿಲ್ಲ. ಈ ನಡೆಗೆ ಚೀನಾವನ್ನೇ ನೇರ ಹೊಣೆ ಮಾಡಲಾಗುವುದು ಎಂದು ಬ್ಲಿಂಕೆನ್ ಹೇಳಿದರು.

‘ಮಾನವ ಹಕ್ಕುಗಳ ರಕ್ಷಣೆ ಪರ ಅಮೆರಿಕ ಯಾವಾಗಲೂ ಧ್ವನಿ ಎತ್ತುವುದು. ಮ್ಯಾನ್ಮಾರ್ನಲ್ಲಿ ನಡೆದ ಮಿಲಿಟರಿ ದಂಗೆಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ದಂಗೆಯನ್ನು ಚೀನಾ ಖಂಡಿಸಬೇಕು ಎಂದು ಬ್ಲಿಂಕೆನ್ ಯಾಂಗ್ ಅವರಿಗೆ ತಿಳಿಸಿದರು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರಿನ್ಸ್ ತಿಳಿಸಿದ್ದಾರೆ.

ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ಉಯಿಘರ್ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತರನ್ನು ಸಾಮೂಹಿಕವಾಗಿ ಕೂಡಿ ಹಾಕಿರುವ ಚೀನಾದ ನಡೆಗೆ ಇತ್ತೀಚೆಗೆ ಅನೇಕ ರಾಷ್ಟ್ರಗಳಿಂದ ಟೀಕೆ ವ್ಯಕ್ತವಾಗಿದೆ.

ಹಾಂಗ್ಕಾಂಗ್ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಕ್ಕೂ ಖಂಡನೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.