ಬೆಂಗಳೂರು: ಲ್ಯಾಂಡಿಂಗ್ ವೇಳೆ ‘ಅಮೆರಿಕ ಏರ್ಲೈನ್ಸ್’ನ ಬೋಯಿಂಗ್ 777 ಎಂಬ ದೈತ್ಯ ವಿಮಾನ ಭಾರಿ ಬಿರುಗಾಳಿಗೆ ಅಲುಗಾಡಿರುವ ಘಟನೆ ಲಂಡನ್ನ ಹಿಥ್ರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದೆ.

ಘಟನೆ ಬಗೆಗಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ‘ಇದೊಂದು ಭಯಾನಕ ಲ್ಯಾಂಡಿಂಗ್’ ಎಂದು ಅನೇಕರು ಉದ್ಘಾರ ತೆಗೆದಿದ್ದಾರೆ. ‘SKY Tv’ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡಿದೆ.

ಪ್ರಯಾಣಿಕರ ಸ್ಥಿತಿ ಬಗ್ಗೆ ಅಮೆರಿಕನ್ ಏರ್ಲೈನ್ಸ್ ಯಾವುದೇ ಹೇಳಿಕೆ ನೀಡಿಲ್ಲ.

ಇಂಗ್ಲೆಂಡ್ಗೆ Gerrit ಎಂಬ ಚಂಡಮಾರುತ ಅಪ್ಪಳಿಸಿದ್ದು ಅಲ್ಲಲ್ಲಿ ಭಾರಿ ಗಾಳಿ, ಮಳೆಯಾಗುತ್ತಿದೆ. ಬಿರುಗಾಳಿಯ ನಡುವೆಯೂ ಬೋಯಿಂಗ್ 777 ವಿಮಾನವನ್ನು ಲ್ಯಾಂಡಿಂಗ್ ಮಾಡುವ ಸಾಹಸವನ್ನು ಮಾಡಲು ಹೋಗಿ ಎಡವಟ್ಟು ಆಗಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಹಿಥ್ರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅನೇಕ ವಿಮಾನಗಳನ್ನು ರದ್ದು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.