ವುಹಾನ್: ಚೀನಾದ ವುಹಾನ್ನಲ್ಲಿರುವ ಸಂಶೋಧನಾ ಕೇಂದ್ರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾಧಿಕಾರಿಗಳು ಬುಧವಾರ ಭೇಟಿ ನೀಡಿದರು.

ವುಹಾನ್ನ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಕೊರೊನಾ ಸೋಂಕು ಉಗಮವಾಗಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಬ್ಲ್ಯೂಎಚ್ಒನ ತಂಡವು ಈ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ವೈರಾಣುವಿನ ಉಗಮದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

2003ರಲ್ಲಿ ಇದೇ ಸಂಶೋಧನಾ ಕೇಂದ್ರದಲ್ಲಿ ಸಾರ್ಸ್ ಬಗ್ಗೆ ಪತ್ತೆ ಹಚ್ಚಲಾಗಿತ್ತು. ಹಾಗಾಗಿ 2019ರಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್, ಇದೇ ಸಂಶೋಧನಾ ಕೇಂದ್ರದ ಪ್ರಯೋಗಾಲಯದಲ್ಲಿ ಉಗಮವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಆದರೆ ಚೀನಾ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಚೀನಾಗೆ ಬೇರೆ ದೇಶಗಳಿಂದ ಸೀಫುಡ್ ಆಮದು ಮಾಡಿಕೊಳ್ಳಲಾಗುತ್ತದೆ. ಈ ವೇಳೆ ವೈರಸ್ ಚೀನಾಗೆ ಬಂದಿರಬಹುದು ಎಂದು ಹೇಳಿದೆ. ಆದರೆ ಅಂತರರಾಷ್ಟ್ರೀಯ ವಿಜ್ಞಾನಿಗಳು ಈ ಪ್ರತಿಪಾದನೆಯನ್ನು ಅಲ್ಲಗೆಳೆದಿದ್ದಾರೆ.

ಸಾರ್ಸ್ ವೈರಸ್ನ ಮೂಲ ಪತ್ತೆ ಹಚ್ಚಿದ ಪ್ರಾಣಿಶಾಸ್ತ್ರಜ್ಞ ಪೀಟರ್ ದಾಸ್ಜಾಕ್ ಅವರ ನೇತೃತ್ವದ ತಂಡದಲ್ಲಿ ವುಹಾನ್ನ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಉಪ ನಿರ್ದೇಶಕ ಶಿ ಝಿಂಗ್ಲಿ ಅವರು ಕೂಡ ಇದ್ದಾರೆ.

ಎರಡು ವಾರಗಳ ಕ್ವಾರಂಟೈನ್ ಬಳಿಕ ಡಬ್ಲ್ಯೂಎಚ್ಒನ ತಂಡವು ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು, ಸಾಂಪ್ರದಾಯಿಕ ಆಹಾರ ಮಾರುಕಟ್ಟೆಗೆ ಭೇಟಿ ನೀಡಿದೆ. ಅಲ್ಲಿಂದ ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಿದೆ. ಅಲ್ಲದೆ ಈ ಬಗ್ಗೆ ಅನುವಂಶೀಯ ವಿಶ್ಲೇಷಣೆ, ಸಾಂಕ್ರಾಮಿಕ ರೋಗಶಾಸ್ತ್ರ ಅಧ್ಯಯನಗಳನ್ನು ಕೂಡ ನಡೆಸುತ್ತಿದೆ. ಈ ತಂಡದಲ್ಲಿ 10 ದೇಶಗಳ ತಜ್ಞರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.