ವಾಷಿಂಗ್ಟನ್: ವಿಶ್ವದ ಅತ್ಯಂತ ಹಳೆಯದಾದ ಹಡಗೊಂದರ ಪಳೆಯುಳಿಕೆಯನ್ನು ವಿಜ್ಞಾನಿಗಳ ತಂಡ ಕಪ್ಪು ಸಮುದ್ರದ ಆಳದಲ್ಲಿ ಮಂಗಳವಾರ ಪತ್ತೆ ಹಚ್ಚಿದೆ.

ಈ ಬಗ್ಗೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ್ದು, ವಿಜ್ಞಾನಿಗಳ ಪ್ರಕಾರ ಇದು ವ್ಯಾಪಾರಿ ಹಡಗು ಆಗಿದ್ದು, ಸುಮಾರು 2400 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸಮುದ್ರದ ತಳದಲ್ಲಿ ಉಳಿದು ಕೊಂಡಿದೆ ಎನ್ನಲಾಗಿದೆ.

ಇಂಗ್ಲೆಂಡ್ ಮೂಲದ ವಿಜ್ಞಾನಿಗಳ ತಂಡ ಕಪ್ಪು ಸಮುದ್ರ ಕಡಲತೀರ ಪುರಾತತ್ವ ಅಧ್ಯಯನ ಯೋಜನೆ ಅಡಿಯಲ್ಲಿ ಸಾಗರದಾಳದಲ್ಲಿ ಶೋಧ ಕಾರ್ಯ ನಡೆಸಿತ್ತು. ಬಲ್ಗೇರಿಯಾ ತೀರಪ್ರದೇಶದಿಂದ ಸುಮಾರು 80.4 ಕಿ.ಮೀ ದೂರದಲ್ಲಿ ಈ ಹಡಗು ಪತ್ತೆಯಾಗಿದ್ದು, 75 ಅಡಿಗಳಷ್ಟು ಉದ್ದವಿದೆ.

ಈ ಹಡಗು ಪ್ರಾಚೀನ ಗ್ರೀಕ್–ರೋಮನ್ನರ ಕಾಲದಲ್ಲಿ ಸಂಚರಿಸುತ್ತಿತ್ತು ಎಂದು ಅಂದಾಜಿಸಲಾಗಿದೆ. ಸಮುದ್ರದ ಆಳದಲ್ಲಿಆಮ್ಲಜನಕ ಕೊರತೆಯಿರುವುದರಿಂದ ಹಡಗಿನ ಅವಶೇಷಗಳು ಹಾಳಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಿಜ್ಞಾನಿಗಳ ತಂಡಕ್ಕೆ ದೊರೆತಿರುವ ವಸ್ತುಗಳನ್ನು ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.