ಇಸ್ಲಾಮಾಬಾದ್ : ಭಾರತದ ಜತೆ ಯುದ್ಧ ಮಾಡಬೇಕು ಎಂಬ ಮನಸ್ಸಿಲ್ಲ; ಆದರೆ, ಶಾಂತಿಯಿಂದಿರಬೇಕು ಎಂಬ ನಮ್ಮ ಬಯಕೆಯನ್ನೇ ತಪ್ಪು ತಿಳಿದುಕೊಳ್ಳಬಾರದು ಎಂದು ಪಾಕಿಸ್ತಾನದ ಸೇನೆ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ಮಾಧ್ಯಮ ವಿಭಾಗ ‘ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್’ನ (ಐಎಸ್‌ಪಿಆರ್) ಮಹಾನಿರ್ದೇಶಕ ಮೇಜರ್ ಜನರಲ್ ಆಸಿಫ್ ಘಫೂರ್, ಈ ವರ್ಷಾರಂಭದಿಂದ ಭಾರತ 1,077 ಬಾರಿ ಕದನವಿರಾಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದರು.

‘ಭಾರತದ ದಾಳಿಗೆ ಪಾಕಿಸ್ತಾನ ಪ್ರತಿಯಾಗಿ ದಾಳಿ ನಡೆಸಿಲ್ಲ. 2003ರಲ್ಲಿ ಕದನವಿರಾಮ ಉಲ್ಲಂಘನೆ ಸಂಬಂಧ ಮಾಡಿಕೊಳ್ಳಲಾದ ಒಪ್ಪಂದದ ಅನ್ವಯ, ಕಳೆದ ವಾರ ಉಭಯ ದೇಶಗಳ ಸೇನೆ ನಡುವೆ ಮಾಡಿಕೊಂಡಿರುವ ಒಪ್ಪಂದವನ್ನು ಪಾಲಿಸಿದ್ದೇವೆ. ಆದರೆ, ನಾಗರಿಕರ ಮೇಲೆ ದಾಳಿ ನಡೆದಾಗ ಒತ್ತಾಯಪೂರ್ವಕವಾಗಿ ಪ್ರತಿದಾಳಿ ಮಾಡಬೇಕಾಯಿತು’ ಎಂದು ಅವರು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.

ಪಾಕಿಸ್ತಾನ ಒಪ್ಪಂದಕ್ಕೆ ಗೌರವ ನೀಡುವುದನ್ನು ಬಯಸುತ್ತದೆ ಎಂದು ಘಫೂರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.