ಕಲಬುರ್ಗಿ: ‘ರಾಜ್ಯ ಸರ್ಕಾರ ಕಾಯಂ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಎಲ್ಲಾ ಇಲಾಖೆಗಳಲ್ಲೂ ಗುತ್ತಿಗೆ ನೌಕರರೇ ತುಂಬಿದ್ದಾರೆ. ಹೀಗಾದರೆ ಶಾಸಕರು, ಸಚಿವರನ್ನೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಬೇಕಲ್ಲವೇ’ ಎಂದು ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ಅವರು ಪ್ರಶ್ನಿಸಿದಾಗ ನಗುವ ಸರದಿ ಮಾಧ್ಯಮದವರದ್ದಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನರು ಶಾಸಕರನ್ನು ಏಕೆ ಆಯ್ಕೆ ಮಾಡಬೇಕು... ಅಯ್ಯೋ ಈ ಶಾಸಕರು, ಸಚಿವರ ಬಗ್ಗೆ ಏನು ಹೇಳಲಿ...’ ಎಂದು ಕ್ಷಣಹೊತ್ತು ಮೌನಕ್ಕೆ ಜಾರಿದರು.

ಅವರ ಮಾತಿಗೆ ಪ್ರತಿಕ್ರಿಯಿಸಿದ ಪತ್ರಕರ್ತರೊಬ್ಬರು, ‘ರಾಜ್ಯದಲ್ಲಿ ಈಗ ನೀವು ಹೇಳಿದಂತಹ ಸ್ಥಿತಿಯೇ ಇದೆ. ಮುಖ್ಯಮಂತ್ರಿ ಅವರು ಗುತ್ತಿಗೆ ಆಧಾರದ ಮೇಲೆ ಇದ್ದಾರೆ’ ಎಂದಾಗ ಕಾಂತಾ ಅವರ ಮುಖದಲ್ಲಿ ನಗು ಮೂಡಿತು.

‘ಕಲಬುರ್ಗಿ ಜಿಲ್ಲಾ ಆಸ್ಪತ್ರೆಯಲ್ಲಿ 10 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 90 ಜನರನ್ನು ಏಕಾಏಕಿ ತೆಗೆದುಹಾಕಲಾಗಿದೆ. ಈ ನೀತಿ ಶಾಸಕರು, ಸಚಿವರಿಗೂ ಅನ್ವಯಿಸುವುದಿಲ್ಲವೇ’ ಎಂದು ಮೆಲು ದನಿಯಲ್ಲೇ ಪ್ರಶ್ನಿಸಿದರು. ಮರು ಕ್ಷಣವೇ ‘ನೀವೆಲ್ಲ ಇದ್ದೀರಿ, ಈ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಆಗ ಸರ್ಕಾರ ಮತ್ತು ಆಡಳಿತ ಕಣ್ಣು ತೆರೆಯುತ್ತವೆ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.