‘ರೀ... ಟಿ.ವಿ ರಿಮೋಟ್ ಕೊಡಿ ಇಲ್ಲಿ, ನಾನು ಏರೋ ಇಂಡಿಯಾ ಷೋ ನೋಡಬೇಕು. ಆಕಾಶದಲ್ಲಿ ಎಂಥೆಂಥ ವಿಮಾನಗಳು ಹೆಂಗೆಂಗೆ ಚಮತ್ಕಾರ ಮಾಡ್ತವೆ ಗೊತ್ತಾ?’ ಮಡದಿ ರಿಮೋಟ್ ಕೇಳಿದಾಗ ನ್ಯೂಸ್ ನೋಡ್ತಿದ್ದ ನಾನು ‘ಇರು, ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಸುದ್ದಿ ಬರ್ತಿದೆ, ನೋಡಿ ಕೊಡ್ತೀನಿ’ ಎಂದೆ.

‘ಆ ದರಿದ್ರ ರಾಜಕೀಯ ಏನ್ ನೋಡ್ತೀರಿ, ಅದರ ಬದ್ಲು ಏರೋ ಷೋ ನೋಡಿದ್ದಿದ್ರೆ ಸ್ವಲ್ಪ ರಿಲ್ಯಾಕ್ಸ್ ಆಗಬಹುದಿತ್ತು...’ ಮಡದಿಗೆ ಕೋಪ.

‘ಇದೂ ಏರೋ ಷೋನೇ ಕಣೆ, ಏರೋ ಕರ್ನಾಟಕ ಷೋ... ರಾಜಕಾರಣಿಗಳು ಗದ್ದುಗೆ ಏರೋ ಷೋ... ಇವರ ಚಮತ್ಕಾರದ ಮುಂದೆ ಆ ನಿನ್ನ ವಿಮಾನಗಳದ್ದು ಯಾವ ಲೆಕ್ಕ?’ ನಕ್ಕೆ.

‘ಹೌದೌದು, ಏರೋ ಇಂಡಿಯಾ ಷೋನಲ್ಲಿ ಹೆಲಿಕಾಪ್ಟರು, ಮಿಗ್ ವಿಮಾನ, ಜೆಟ್ ವಿಮಾನ, ಫೈಟರು ಗೀಟರು ಎಲ್ಲ ಹೆಂಗ್ ಹಾರ್ತವೆ, ಪಲ್ಟಿ ಹೊಡೀತವೆ, ಕಲ್ ಕಲರ್ ಹೊಗೆನಲ್ಲಿ ಹೆಂಗೆಂಗ್ ಚಿತ್ತಾರ ಬಿಡಿಸ್ತವೆ ನೋಡಿದೀರಾ?’

‘ಮತ್ತೆ ನಮ್ಮ ರಾಜಕಾರಣಿಗಳೇನು ಕಮ್ಮಿನಾ? ಗದ್ದುಗೆ ಏರೋಕೆ ಏನೆಲ್ಲ ಷೋ ಮಾಡ್ತಾರೆ, ಜನರ ಮುಂದೆ ನಾಟಕ ಮಾಡ್ತಾರೆ, ಕಣ್ಣೀರು ಹಾಕ್ತಾರೆ, ಕಲ್ ಕಲರ್ ಕಾಗೆ ಹಾರಿಸ್ತಾರೆ... ಸ್ವಲ್ಪ ನೋಡಿ ಮಜಾ ತಗೋ ಬಾ...’

‘ಹೇ ಹೋಗ್ರಿ, ನಿಮಗೆ ಎಲ್ಲ ತಮಾಷೆನೇ, ನಂಗೆ ಈ ರಾಜಕೀಯ ಎಲ್ಲ ಇಷ್ಟ ಆಗಲ್ಲ, ನೀವೇ ನೋಡ್ಕಳಿ’.

‘ಸ್ವಲ್ಪ ತಡಿಯೇ, ಏರೋ ಇಂಡಿಯಾ ಷೋ ರಾತ್ರಿ ಡೀಟೇಲಾಗಿ ಬರುತ್ತೆ, ಈಗಲ್ಲ’.

‘ಸರಿ, ‘ಮನೆಯೊಂದು ಆರು ಬಾಗಿಲು’ ಧಾರಾವಾಹಿನಾದ್ರೂ ನೋಡ್ತೀನಿ, ರಿಮೋಟ್ ಕೊಡಿ’.

‘ಅದೂ ಏರೋ ಷೋನೇ ಕಣೆ’.

‘ಅಂದ್ರೆ?’

‘ಬಿ.ಪಿ. ಏರೋ ಷೋ!’

‘ಥೂ ನಿಮ್ಮ...’ ಮಡದಿಗೆ ನಗು ತಡೆಯಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.